ಅಸಮಾನತೆಯ ಭಾರತ ನಿರ್ಮಾಣ ಬೇಸರದ ಸಂಗತಿ

nagamohan das
ಶಾಂತಿಯ ಸಂದೇಶ : ಸೌಹಾರ್ದ ಸಪ್ತಾಹ ಮತ್ತು ಶಾಂತಿಯ ನಡಿಗೆ ಸೌಹಾರ್ದತೆ ಕಡೆಗೆ ಜಾಥಾದ ಸಮಾರೋಪ ಸಮಾರಂಭಲ್ಲಿ ನಾಗಮೋಹನ ದಾಸ್, ಡಾ.ಪಿ.ನಾರಾಯಣ್, ಡಾ.ಎ.ಅನಲ, ಕೆ.ಪಿ.ಶ್ರೀಪಾಲ್, ಮೌಲಾನಾ ಶಾಹುಲ್ ಹಮೀದ್ ಮುಂತಾದವರು ಪಾಲ್ಗೊಂಡಿದ್ದರು.
Published on

ಶಿವಮೊಗ್ಗ: ದೇಶದ ಜನರನ್ನು ಹಸಿವು, ಬಡತನದಿಂದ ವಿಮೋಚನೆ ಮಾಡಬೇಕೆಂಬುದು ಗಾಂಧೀಜಿಯವರ ಆಸೆಯಾಗಿತ್ತು. ಅದರೆ ಇಂದಿಗೂ ನಮ್ಮ ನಡುವೆ ಅನಕ್ಷರತೆ, ಹಸಿವು, ಬಡತನದಿಂದ ಬಳಲುವವರಿದ್ದಾರೆ. ಶೇ.80ರಷ್ಟು ಸಂಪತ್ತು ಶೇ.20ರಷ್ಟು ಶ್ರೀಮಂತರ ಬಳಿಯಿದೆ. ನಾವು ಅಸಮಾನತೆಯ ಭಾರತವನ್ನು ಕಟ್ಟುತ್ತಿದ್ದೇವೆ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ಬೇಸರ ವ್ಯಕ್ತಪಡಿಸಿದರು.

ಸಿ.ಭೀಮಸೇನರಾವ್ ಕಾನೂನು ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಕಾನೂನು ಅಧ್ಯಯನ ಕೇಂದ್ರದಿಂದ ಗಾಂಧಿ ಜಯಂತಿ ಪ್ರಯುಕ್ತ ಮಂಗಳವಾರ ಏರ್ಪಡಿಸಿದ್ದ ಶಾಂತಿಯ ಸಂದೇಶ : ಸೌಹಾರ್ದ ಸಪ್ತಾಹ ಮತ್ತು ಶಾಂತಿಯ ನಡಿಗೆ ಸೌಹಾರ್ದತೆ ಕಡೆಗೆ ಜಾಥಾದ ಸಮಾರೋಪ ಸಮಾರಂಭಲ್ಲಿ ಅವರು ಮಾತನಾಡಿದರು.

ಗಾಂಧೀಜಿಯವರ ಕನಸನ್ನು ಪೂರ್ಣಗೊಳಿಸುವ ಕಾರ್ಯವನ್ನು ಯುವ ಸಮೂಹ ಮಾಡಬೇಕಿದೆ. ಹಸಿವು, ಬಡತನಮುಕ್ತ ಸಮಾಜ ನಿರ್ಮಾಣಕ್ಕೆ ಕಂಕಣಬದ್ದರಾಗಬೇಕು. ಗಾಂಧೀಜಿಯವರು ರೈತರು, ಮಹಿಳೆಯರು, ಎಲ್ಲ ಭಾಷೆ, ಜಾತಿಯ ಜನರನ್ನು, ಬ್ರಿಟಿಷರ ವಿರುದ್ಧ ಸಂಘಟಿಸುತ್ತಿದ್ದರು. ಅದರೆ ಇಂದು ಐಕ್ಯತೆಯನ್ನು ದೂರ ಮಾಡಿ ವಿಷವನ್ನು ಬಿತ್ತುವ ಕಾರ್ಯ ನಮ್ಮ ನಡುವೆ ಆಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಬಸವಕೇಂದ್ರದ ಡಾ.ಶ್ರೀ ಬಸವಮರುಳಸಿದ್ದ ಸ್ವಾಮೀಜಿ, ಪ್ರಾಚಾರ್ಯೆ ಡಾ.ಎ.ಅನಲ, ಎಸ್‌ವೈಎಫ್ ರಾಜ್ಯ ಸಮಿತಿ ಕಾರ್ಯದರ್ಶಿ ಮೌಲಾನಾ ಶಾಹುಲ್ ಹಮೀದ್, ಎಸ್‌ಎಂಎಸ್‌ಎಸ್ ನಿರ್ದೇಶಕ ಫಾದರ್ ಪಿಯೂಸ್ ಡಿಸೋಜ, ಎನ್‌ಇಎಸ್ ಸಹಕಾರ್ಯದರ್ಶಿ ಡಾ.ಪಿ.ನಾರಾಯಣ್ ವಕೀಲ ಕೆ.ಪಿ.ಶ್ರೀಪಾಲ, ಐಕ್ಯುಎಸಿ ಸಂಯೋಜಕ ಡಾ.ಎಸ್.ಕಾಂತರಾಜ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net