ಷರತ್ತು ಉಲ್ಲಂಸಿಲ್ಲ, ನನಗೆ ಬಂದೂಕು ಬೇಕು

darshan bail postponed
Published on

ಬೆಂಗಳೂರು: ಗನ್ ಪರವಾನಗಿ ರದ್ದುಪಡಿಸುವ ಸಂಬಂಧ ಪೊಲೀಸ್ ಇಲಾಖೆಗೆ ನೀಡಿದ್ದ ನೋಟಿಸ್‌ಗೆ ನಟ ದರ್ಶನ್ ಉತ್ತರ ನೀಡಿದ್ದಾರೆ. ಕೊಲೆ ಪ್ರಕರಣದಲ್ಲಿ ಕೋರ್ಟ್ ಜಾಮೀನು ಕೊಡುವಾಗ ವಿಧಿಸಿದ ಯಾವುದೇ ಷರತ್ತು ಉಲ್ಲಂಘಿಸಿಲ್ಲ. ಹೀಗಾಗಿ ನನಗೆ ನೀಡಿರುವ ಬಂದೂಕು ಪರವಾನಗಿ ರದ್ದುಪಡಿಸದಂತೆ ನಗರದ ಡಿಸಿಪಿಗೆ (ಆಡಳಿತ) ನಟ ದರ್ಶನ್ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಯಾದ ದರ್ಶನ್‌ಗೆ ನೀಡಲಾಗಿದ್ದ ಬಂದೂಕು ಪರವಾನಗಿ ಹಿಂಪಡೆಯುವ ಬಗ್ಗೆ ಡಿಸಿಪಿ ನೋಟಿಸ್ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ದರ್ಶನ್, ಯಾವುದೇ ಷರತ್ತುಗಳನ್ನು ಉಲ್ಲಂಘನೆ ಮಾಡಿಲ್ಲ. ಕಾನೂನಾತ್ಮಕವಾಗಿ ಜಾಮೀನು ಪಡೆದುಕೊಂಡಿದ್ದೇನೆ. ಜಾಮೀನಿಗೆ ವಿಧಿಸಿರುವ ಷರತ್ತುಗಳನ್ನು ಪಾಲನೆ ಮಾಡುತ್ತಿದ್ದೇನೆ. ಬೆಂಗಳೂರಿನಿಂದ ಹೊರಗೆ ಹೋಗುವ ಮುನ್ನ ಕೋರ್ಟ್ ಅನುಮತಿ ಸಹ ಪಡೆದಿದ್ದೇನೆ. ಹೀಗಾಗಿ ತಾವು ಬಂದೂಕು ಪರವಾನಗಿ ರದ್ದುಪಡುವ ಅಗತ್ಯವೇ ಇಲ್ಲವೆಂದು ದರ್ಶನ್ ಪತ್ರ ಬರೆದಿದ್ದಾರೆ.

ಸಿನಿಮಾ ಚಿತ್ರೀಕರಣ ಮತ್ತು ವೈಯಕ್ತಿಕ ಕಾರ್ಯಕ್ರಮಗಳಿಗೆ ಬೆಂಗಳೂರಿನಿಂದ ಹೊರಗೆ ಸಹ ಪ್ರಯಾಣಿಸುವೆ. ನನ್ನ ಭದ್ರತೆ ಸಲುವಾಗಿ ಬಂದೂಕು ಬಳಕೆ ಅಗತ್ಯವಾಗಿದೆ. ಈ ಸುರಕ್ಷತೆ ಬಗ್ಗೆ ಪರಿಗಣಿಸುವಂತೆ ಪೊಲೀಸ್ ಇಲಾಖೆಗೆ ದರ್ಶನ್ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net