ಸಿಎಂ ಪತ್ನಿ ದಾಖಲೆ ಪ್ರಕರಣದಲ್ಲಿ ನಗರಾಭಿವೃದ್ಧಿ ಸಚಿವರ ಸಮಜಾಯಿಷಿ

muda
Published on

ಬೆಂಗಳೂರು: ಮುಡಾ ನಿವೇಶನ ಹಗರಣ ಇನ್ನೊಂದು ಮಗ್ಗುಲಿಗೆ ತಿರುಗಿದ್ದು, ಮುಖ್ಯಮಂತ್ರಿ ಪತ್ನಿ ಪಾರ್ವತಿಯವರ ದಾಖಲೆ ತಿದ್ದಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ದಾಖಲೆ ತಿದ್ದುವಂತ ಪರಿಸ್ಥಿತಿ ಬಂದಿಲ್ಲ. ಅಂತಹ ನೀಚ ಕೆಲಸಕ್ಕೆ ನಾವ್ಯಾರೂ ಇಳಿದಿಲ್ಲ ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕುಮಾರಸ್ವಾಮಿಗೆ ಒಂದು ಮಾತು ಹೇಳುತ್ತೇನೆ. ನಿಮ್ಮಲ್ಲಿ ಏನೇ ದಾಖಲೆ ಇದ್ದರೂ ಕೋರ್ಟ್‌ಗೆ ಕೊಡಿ. ಏಕೆ ನೀವು ಸುಮ್ಮನೆ ಅಪಪ್ರಚಾರ ಮಾಡುತ್ತೀರಿ? ನ್ಯಾಯಾಧೀಶರೇ ನಾನು ಬಗೆಹರಿಸುತ್ತೇನೆ ಅಂದಿದ್ದಾರಲ್ಲ. ಅಲ್ಲಿಯವರೆಗೆ ಕಾಯೋಕೆ ಏನು? ಎಂದು ಕಿಡಿಕಾರಿದರು.

ಅಲ್ಲಿ ಬೇರೆನೋ ಆಗಿದೆ ಅನ್ನೋದು ಅಲ್ಲ. ಇದು ನಮ್ಮ ೆರ್ಟ್‌ಪೋಲಿಯೋ ಅಲ್ಲ. ಹಾಗೆಯೇ, ಏನೂ ಮಿಸ್ಟೇಕ್ ಆಗುವುದೇ ಇಲ್ಲವೇ? ಎಂದ ಅವರು ಈ ಪ್ರಕರಣದಲ್ಲಿ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ಇದೆ. ಏನೇ ದಾಖಲೆ ಇದ್ದರೂ ಅಲ್ಲಿಗೆ ಸಲ್ಲಿಸಲಿ ಎಂದರು.

ಸಿಎಂ ಪತ್ನಿ ಹೆಸರಿನಲ್ಲಿನ ಜಮೀನಿಗೆ ಪರಿಹಾರ ನೀಡಿಲ್ಲ. ಅಷ್ಟೇ ವಿಸ್ತೀರ್ಣದ ಜಮೀನು ಎಂದು ಹೇಳಿದ್ದಾರೆ, ಅಲ್ಲಿ ವರ್ಷ ನಮೂದಿಸುವಾಗ ತಪ್ಪು ಆಗಿರಬಹುದು. ಸಮಾನಾಂತರ ಬಡಾವಣೆಯಲ್ಲಿ ನೀಡುವಂತೆ ಕೋರುತ್ತೇನೆ ಎಂದು ಬಹಳ ಸ್ಪಷ್ಟವಾಗಿಯೇ ಹೇಳಿದ್ದಾರೆ. ವಿಜಯನಗರ ಲೇಔಟ್ ಅಲ್ಲಿ ಎಂದು ಎಲ್ಲಿ ಬರೆದಿದ್ದಾರೆ, ಸಮಾನಾಂತರ ಜಾಗದಲ್ಲಿ ಅಂತ ಬರೆದಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಮಾಧ್ಯಮಗಳು ಎಲ್ಲವನ್ನ ನೋಡಿ ಹಾಕಬೇಕು, ದಾಖಲೆ ತಿದ್ದುವಂತ ನೀಚ ಕೃತ್ಯ ಯಾರು ಮಾಡಿಲ್ಲ. ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ನಾನು ಮಾತನಾಡಲ್ಲ ಎಂದರಲ್ಲದೇ, ಅವರು ಯಾವತ್ತೂ ಹೆಲಿಕಾಪ್ಟರ್‌ನಲ್ಲಿ ಹೋಗೇ ಇಲ್ಲವೇ ಎಂದು ಮಾತಲ್ಲೇ ತಿವಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net