VIDEO: ಪ್ರಶಸ್ತಿ ಪ್ರದಾನ ವೇಳೆ ಕ್ರಿಡಾಪಟುವಿನ ಬಳೆ ನೋಡಿ ಚಿನ್ನದ್ದಾ ಎಂದು ಕೇಳಿದ ಸಿಎಂ ಯಡಿಯೂರಪ್ಪ...

CM Bangles
Published on

ಏಕಲವ್ಯ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಸಿಎಂ ಬಿ.ಎಸ್​.ಯಡಿಯೂರಪ್ಪನವರಿಗೆ ಕ್ರೀಡಾಪಟು ಓರ್ವಳ ಬಳೆಯ ಮೇಲೆ ಕಣ್ಣು ಬಿದ್ದಿದೆ.

ಪ್ರಶಸ್ತಿ ನೀಡಲು ಕ್ರೀಡಾಪಟುಗಳನ್ನು ಸಾಲಾಗಿ ಖುರ್ಚಿಯ ಮೇಲೆ ಕೂರಿಸಲಾಗಿತ್ತು. ಸ್ವಿಮ್ಮಿಂಗ್​​ನಲ್ಲಿ ಏಕಲವ್ಯ ಪ್ರಶಸ್ತಿಗೆ ಭಾಜನರಾಗಿರುವ ಖುಷಿ ದಿನೇಶ್​ ಧರಿಸಿದ್ದ ಬಳೆಯನ್ನು ನೋಡಿ ಮುಖ್ಯಮಂತ್ರಿ ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಖುಷಿಯ ಕೈ ಹಿಡಿದುಕೊಂಡು ಬಳೆ ನೋಡಿದ ಯಡಿಯೂರಪ್ಪನವರು, ಇದು ಚಿನ್ನದ ಬಳೆನಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಖುಷಿ..ಇಲ್ಲ ಸರ್​ ಆರ್ಟಿಫಿಷಿಯಲ್​ ಎಂದಿದ್ದಕ್ಕೆ, ಈ ತರ ಸಮಾರಂಭಕ್ಕೆಲ್ಲ ಚಿನ್ನದ ಬಳೆ ಹಾಕಿಕೊಂಡು ಬರಬೇಕಮ್ಮಾ ಎಂದು ಸಿಎಂ ಹಾಸ್ಯ ಮಾಡಿದ್ದಾರೆ. ಮುಖ್ಯಮಂತ್ರಿ ಖುಷಿಯ ಬಳೆ ಹಿಡಿದು ನೋಡಿದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

 ವಿಡಿಯೋಕ್ಕಾಗಿ ಇಲ್ಲಿ ಕ್ಲಿಕ್ಕಿಸಿ: https://www.facebook.com/DighvijayNews/videos/364210528348248

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net