ಸಂಘಟನೆಗೆ ಬಲ ತಂದ ಕೋಟಿ ಗಾಯತ್ರಿ ಯಜ್ಞ ಜಪ

ಎನ್.ಆರ್.ಪುರ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾ ಸದಸ್ಯರ ಸಭೆಯನ್ನು  ವಿಜಯರಂಗ ಕೋಟೆತೋಟ ಉದ್ಘಾಟಿಸಿದರು.
ಎನ್.ಆರ್.ಪುರ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾ ಸದಸ್ಯರ ಸಭೆಯನ್ನು ವಿಜಯರಂಗ ಕೋಟೆತೋಟ ಉದ್ಘಾಟಿಸಿದರು.
Published on
ಎನ್.ಆರ್.ಪುರ: ಕೋಟಿ ಗಾಯತ್ರಿ ಯಜ್ಞ ಜಪ ಮಲೆನಾಡ ಹೆಬ್ಬಾರ ಬ್ರಾಹ್ಮಣ ಸಂಘಟನೆಗೆ ಬಲ ತಂದಿದೆ ಎಂದು ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾದ ಗೌರವಾಧ್ಯಕ್ಷ ಜಿ.ಸಿ.ಗೋಪಾಲ ಕೃಷ್ಣ ತಿಳಿಸಿದರು.
ಕಾನೂರಿನ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ನಡೆದ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾದ ಎನ್.ಆರ್.ಪುರ ಘಟಕ ಹಾಗೂ ಯುವ ಬಳಗದ ಆಶ್ರಯದಲ್ಲಿ ನಡೆದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ಬ್ರಾಹ್ಮಣರು ಪ್ರತಿ ನಿತ್ಯ ಸಂದ್ಯಾವಂದನೆ ಮಾಡಬೇಕು. ನಮ್ಮ ಸಮಾಜದಿಂದ ಕೋಟಿ ಗಾಯಿತ್ರಿ ಯಜ್ಞ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪ್ರಾರಂಭದ ವರ್ಷದಲ್ಲೇ 3 ತಿಂಗಳಿಗೆ 1 ಕೋಟಿ ಗಾಯಿತ್ರಿ ಮಂತ್ರ ಹೇಳಿದ್ದರು. ಒಂದೇ ವರ್ಷದಲ್ಲಿ 3 ಕೋಟಿ ಗಾಯಿತ್ರಿ ಮಂತ್ರ ಜಪ ಮಾಡಲಾಗಿತ್ತು. ಗಾಯಿತ್ರಿ ಮಂತ್ರವು ವೇದ ಅಧ್ಯಯನಕ್ಕೆ ಸಮನಾಗಿದೆ ಎಂದರು.
ಮಲೆನಾಡ ಹೆಬ್ಬಾರ ಬ್ರಾಹ್ಮಣ ಸಭಾದ ಕೇಂದ್ರ ಸಮಿತಿ ಅಧ್ಯಕ್ಷ ವಿಜಯರಂಗ ಕೋಟೆತೋಟ ಮಾತನಾಡಿ, ಸೆ.17ರಂದು ಶೃಂಗೇರಿಯಲ್ಲಿ ಗುರು ದರ್ಶನ ಕಾರ್ಯಕ್ರಮ ನಡೆಯಲಿದೆ. ಶೃಂಗೇರಿ ಮಠದಲ್ಲಿ ಭಗವದ್ಗೀತೆ ಯಜ್ಞ ಪಾರಾಯಣ ನಡೆಸುತ್ತಿದ್ದು 2 ವರ್ಷದಲ್ಲಿ 6 ವಿಭಾಗ ಮಾಡಿದ್ದು 18 ಅಧ್ಯಾಯ ಮುಗಿಸಬೇಕಾಗಿದೆ. ಇದರಿಂದ ಭಗವದ್ಗೀತೆ ಕಂಠ ಪಾಠವಾಗಲಿದೆ. ಕೋಟಿ ಗಾಯಿತ್ರಿ ಜಪ ಯಜ್ಞದಲ್ಲಿ ಮಕ್ಕಳು ಸಹ ಭಾಗವಹಿಸಬಹುದು. 1 ವರ್ಷದಲ್ಲಿ 75 ಸಾವಿರಕ್ಕಿಂತ ಹೆಚ್ಚು ಗಾಯಿತ್ರಿ ಜಪ ಮಾಡಿದವರಿಗೆ ಕೇಂದ್ರ ಸಮಿತಿಯಿಂದ ಗೌರವಿಸಲಾಗುವುದು ಎಂದರು.
ಶಾರದಾ ವಿವಿಧೋದ್ದೇಶ ಸಹಕಾರ ಸಂಘದ ವ್ಯವಹಾರದ ಬಗ್ಗೆ ನಿರ್ದೇಶಕಿ ಸಂದ್ಯಾ ಶ್ರೀನಾಥ್ ಮಾಹಿತಿ ನೀಡಿದರು. ಹೆಬ್ಬಾರ ಬ್ರಾಹ್ಮಣ ಸಭಾ ಎನ್.ಆರ್.ಪುರ ಘಟಕದ ಅಧ್ಯಕ್ಷ ಎ.ವಿ.ಪ್ರಶಾಂತ್, ಕಾರ್ಯದರ್ಶಿ ಕೆ.ವಿ.ಪ್ರಭಾಕರ, ಖಜಾಂಚಿ ಕೆ.ಆರ್.ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಚರಣ ಹೆಬ್ಬಾರ, ಎ.ಎಸ್.ವೆಂಕಟರಮಣ, ಕೆ.ವಿ.ಪ್ರಭಾಕರ, ವೈ.ಎಂ.ಮಧು, ಸುಭಾಷ,ದಿವ್ಯರಾಮಚಂದ್ರ, ವಾಸವಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net