ಆಂಬ್ಯುಲೆನ್ಸ್‌ಗೆ ದಾರಿ ಬಿಡಲು ಹೋಗಿ ಕಾರು ಪಲ್ಟಿ

accident-15
Published on

ಬೆಂಗಳೂರು: ಆಂಬ್ಯುಲೆನ್ಸ್‌ಗೆ ದಾರಿ ಬಿಡಲು ಹೋಗಿ ಕಾರು ಪಲ್ಟಿಯಾಗಿರುವ ಘಟನೆ ಸೋಮವಾರ್ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣೆ ವ್ಯಾಪ್ತಿಯ ಕೋನಪ್ಪನ ಅಗ್ರಹಾರ
ಮೇಲು ಸೇತುವೆ ಮೇಲೆ ನಡೆದಿದ್ದು ಇದರ ವಿಡಿಯೋ ವೈರಲ್ ಆಗಿದೆ.
ಸೋಮವಾರ ಸಂಜೆ ೬ ಗಂಟೆ ಸುಮಾರಿಗೆ ಕೋನಪ್ಪನ ಅಗ್ರಹಾರ ಮೇಲು ಸೇತುವೆಯಲ್ಲಿ ನಗರದಿಂದ ತಮಿಳುನಾಡ ಕಡೆ ಆಂಬ್ಯುಲೆನ್ಸ್ ವೇಗವಾಗಿ ಹೋಗುತ್ತಿತ್ತು.ಅದೇ ವೇಳೆ ಕಾರು ಕೂಡ ಅದೇ ಮಾರ್ಗದಲ್ಲಿ ಹೋಗುತ್ತಿದ್ದು, ಆಂಬ್ಯುಲೆನ್ಸ್‌ಗೆ ಜಾಗ ಬಿಡಲು ಕಾರು ಚಾಲಕ ಕೊಂಚ ಎಡಭಾಗಕ್ಕೆ ತಿರುಗಿಸಿದ್ದಾನೆ. ಆಗ ಹಿಂದೆ ಬರುತ್ತಿದ್ದ ಆಂಬ್ಯುಲೆನ್ಸ್ ಕಾರಿಗೆ ತಗುಲಿದ್ದು, ಪರಿಣಾಮ ಕಾರು ಪಲ್ಟಿ ಆಗಿದೆ. ಬಳಿಕ ಆಂಬ್ಯುಲೆನ್ಸ್ ಮುಂದೆ ಹೋಗುತ್ತಿದ್ದ ಇತರೆ ಮೂರು ವಾಹನಗಳಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ನಡೆದಿದೆ. ಅಪಘಾತದ ವಿಡಿಯೋ ಮುಂಬದಿ ಚಲಿಸುತ್ತಿದ್ದ ಕಾರಿನ ಬ್ಯಾಕ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾರು ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚೇತರಿಸಿಕೊಂಡಿದ್ದಾರೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net