ಮಿಲ್ಟ್ರಿ ಸತೀಶನ ಕೊಂದಿದ್ದ ನಾಲ್ವರ ಸೆರೆ

arrest
Published on

ಬೆಂಗಳೂರು: ಹಳೇ ದ್ವೇಷದ ಹಿನ್ನೆಲೆಯಲ್ಲಿ ಇತ್ತೀಚೆಗೆ ಮನೆಗೆ ನುಗ್ಗಿ ರೌಡಿಶೀಟರ್ ಸತೀಶ್ ಅಲಿಯಾಸ್ ಮಿಲ್ಟ್ರಿ ಸತೀಶನನ್ನು ಹತ್ಯೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ವಿವೇಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.


ವಿವೇಕನಗರ ನಿವಾಸಿಗಳಾದ ಸುನೀಲ್ ಜೇಮ್ಸ್, ಪ್ರಶಾಂತ್, ಕ್ಲಾಮೇಟ್ ಹಾಗೂ ಧನುಷ್ ಬಂಧಿತರು. ಆರೋಪಿಗಳು ಜ. ೨೪ರಂದು ಸತೀಶ್ ಮನೆಗೆ ನುಗ್ಗಿ ಹತ್ಯೆ ಮಾಡಿ ಪರಾರಿಯಾಗಿದ್ದರು.


ಮಾಯಾ ಬಜಾರ್ ನಿವಾಸಿ ಸತೀಶ್ ವಿರುದ್ಧ ಕೊಲೆ, ಡಕಾಯತಿಗೆ ಸಂಚು ಸೇರಿ ಹಲವಾರು ಅಪರಾಧ ಪ್ರಕರಣಗಳು ದಾಖಲಾಗಿವೆ. ವಿವೇಕನಗರ ಠಾಣೆ ರೌಡಿಶೀಟರ್ ಆಗಿರುವ ಸತೀಶ್, ಕೆಲ ದಿನಗಳ ಹಿಂದೆ ಬಾರ್‌ವೊಂದಕ್ಕೆ ಹೋಗಿದ್ದ. ಅದೇ ಬಾರ್‌ಗೆ ಆರೋಪಿ ಪ್ರಶಾಂತ್ ಹಾಗೂ ಸ್ನೇಹಿತರು ಹೋಗಿದ್ದರು. ಆಗ ಬಾರ್‌ನಲ್ಲಿ ಪ್ರಶಾಂತ್ ಜತೆ ಜಗಳ ತೆಗೆದಿದ್ದ ಸತೀಶ್, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಅಲ್ಲದೆ, ಪದೇ ಪದೇ ಸಿಕ್ಕಾಗ ಕೊಲೆ ಬೆದರಿಕೆಯೊಡ್ಡುತ್ತಿದ್ದ. ಅದರಿಂದ ಆಕ್ರೋಶಗೊಂಡಿದ್ದ ಪ್ರಶಾಂತ್, ಸ್ನೇಹಿತರ ಜತೆ ತೆ ಸೇರಿ ಸತೀಶ್‌ನನ್ನು ಕೊಲೆಗೈಯಲು ಸಂಚು ರೂಪಿಸಿದ್ದ. ಅದಂತೆ ಜ.೨೩ರಂದು ರಾತ್ರಿ ಊಟ ಮಾಡಿ ಮನೆಯ ಹಾಲ್‌ನಲ್ಲಿ ಸತೀಶ್ ಮಲಗಿದ್ದ. ಅವರ ಪತ್ನಿ ಹಾಗೂ ಮಕ್ಕಳು ಬೇರೆ ರೂಮ್‌ನಲ್ಲಿ ಮಲಗಿದ್ದರು. ತಡರಾತ್ರಿ ೨.೩೦ರಲ್ಲಿ ಆರೋಪಿಗಳು ಮನೆ ನುಗ್ಗಿ ಸತೀಶ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು, ಹೊಟ್ಟೆ, ಕೈ-ಕಾಲು ಸೇರಿ ದೇಹದ ಇತರ ಭಾಗಗಳ ಮೇಲೆ ಮನಬಂದಂತೆ ಹಲ್ಲೆ ನಡೆಸಿ, ಕೊಲೆಗೈದು ಪರಾರಿಯಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net