ನನೆಗುದಿಗೆ ಬಿದ್ದ ಸೇತುವೆ ಕಾಮಗಾರಿ

klr road problam
ಕೋಲಾರ ತಾಲೂಕಿನ ತೊಂಡಾಲ, ನಾಯಕರಹಳ್ಳಿ ರಸ್ತೆ ಮಾರ್ಗದಲ್ಲಿ ಸೇತು ಕಾಮಗಾರಿ ಸ್ಥಗಿತಗೊಂಡಿರುವುದು.
Published on

ಕಿರುವಾರ ಎಸ್​. ಸುದರ್ಶನ್​ ಕೋಲಾರ
ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮೂರು ವರ್ಷ ಕಳೆದರೂ ಕೆಲಸ ಆರಂಭವಾಗದೆ ವಾಹನ ಸವಾರರು ನಿತ್ಯವೂ ಪರದಾಡುವಂತಾಗಿದೆ.

ತಾಲೂಕಿನ ಗೂಳಿಗಾನಹಳ್ಳಿ ಸಮೀಪ ಲೋಕೋಪಯೋಗಿ ಇಲಾಖೆಯಿಂದ 2019-20ನೇ ಸಾಲಿನಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಹಾಗೂ ಡಾಂಬರ್​ ರಸ್ತೆ ಅಭಿವೃದ್ಧಿಗಾಗಿ ಟೆಂಡರ್​ ಕರೆಯಲಾಗಿತ್ತು. ಈ ಟೆಂಡರ್​ ಪಡೆದ ಬೆಂಗಳೂರು ಮೂಲದ ಗುತ್ತಿಗೆದಾರ ಡಾಂಬರ್​ ಹಾಕಿ, ಸೇತುವೆ ನಿರ್ಮಾಣಕ್ಕೆ ಕಂಬಿ ಹಾಕಿ ಮೂರು ವರ್ಷಗಳೇ ಕಳೆದಿವೆಯಾದರೂ ಕಾಮಗಾರಿ ಆರಂಭಿಸಿಲ್ಲ
ಸೇತುವೆ ನಿರ್ಮಾಣಕ್ಕೆ ರಸ್ತೆ ಅಗೆಯಲಾಗಿದ್ದು, ಕಾಮಗಾರಿ ನಡೆಯುತ್ತಿರುವ ಪಕ್ಕದಲ್ಲೇ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಿದ್ದು, ಈಗ ಮಳೆಗಾಲವಾಗಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿದೆ.
ಕೋಲಾರದಿಂದ ತಾಲೂಕಿನ ತೊಂಡಾಲ, ನಾಯಕರಹಳ್ಳಿ ಗ್ರಾಮಗಳಿಗೆ ಹೋಗಲು ಇದು ಪ್ರಮುಖ ರಸ್ತೆಯಾಗಿದ್ದು, ಕಾಮಗಾರಿ ನನೆಗುದಿಗೆ ಬಿದ್ದಿರುವುದು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.
ಮುದುವಾಡಿ ಕೆರೆ ಕೋಡಿ ಹರಿದರೆ ಮುಖ್ಯ ಕಾಲುವೆಯಿಂದ ಮಣಿಟ್ಟ ಕೆರೆಗೆ ನೀರು ಹರಿಯುತ್ತದೆ. ಸೇತುವೆಗೆ ರಸ್ತೆ ಅಗೆದು ಕಾಲುವೆ ಹಾನಿಪಡಿಸಿದ್ದರಿಂದ ಮಳೆ ಬಂದರೆ ರೈತರ ತೋಟಗಳಿಗೆ ನೀರು ಹರಿದು ಬೆಳೆ ಹಾನಿಯಾಗುವಂತಾಗಿದೆ. ಈ ಬಗ್ಗೆ ಹಿಂದಿನ ಶಾಸಕರ ಗಮನಕ್ಕೆ ತಂದಿದ್ದರೂಯಾವುದೇ ಪ್ರಯೋಜನೆಯಿಲ್ಲ ಎಂದು ತೊಂಡಾಲ, ನಾಯಕರಹಳ್ಳಿ ಗ್ರಾಮಸ್ಥರು ಕಿಡಿಕಾರಿದ್ದಾರೆ.
ಮುದುವಾಡಿ ಕೆರೆ ಕೋಡಿ ಹರಿದರೆ ಕೋಲಾರ&ಶ್ರೀನಿವಾಸಪುರ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳ್ಳುತ್ತದೆ. ಆಗ ಪರ್ಯಾಯವಾಗಿ ಮಣಿಟ್ಟ ರಸ್ತೆ, ಅಣ್ಣಿಹಳ್ಳಿ ಮಾರ್ಗವಾಗಿ ಕೋಲಾರಕ್ಕೆ ಹೋಗಬೇಕು. ಜೋರು ಮಳೆಯಾಗುವ ಮುನ್ನವೇ ಕಾಮಗಾರಿ ಆರಂಭಿಸಿ ಕೆಲಸ ಪೂರ್ಣಗೊಳಿಸುವಂತೆ ಸ್ಥಳಿಯರು ಆಗ್ರಹಿಸಿದ್ದಾರೆ.

  • ನಕರದ ಅನುಭವ
    ನಾಯಕರಹಳ್ಳಿ, ತೊಂಡಾಲ ಗ್ರಾಮಗಳಿಂದ ಶಾಲಾ ವಾಹನಗಳು, ವಿದ್ಯಾರ್ಥಿಗಳು, ತರಕಾರಿ ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತವೆ. ಹಿಂದಿನ ವರ್ಷ ಮಳೆ ಆದಾಗ ನರಕ ಅನುಭವಿಸಿದ್ದಾರೆ. ವಾಹನ ಅಪಘಾತಗಳಾಗಿ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದು, ಕೈ ಕಾಲು ಮುರಿದು ಅಂಗವಿಕಲರಾಗಿದ್ದಾರೆ. ಇನ್ನಾದರೂ ಸೇತುವೆ ಕೆಲಸ ಪೂರ್ಣಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
  • 17 ಬಾರಿ ನೋಟಿಸ್​ ನೀಡಿದರೂ ಪ್ರತಿಕ್ರಿಯೆ ಇಲ್ಲ
    ಗುತ್ತಿಗೆದಾರ, ರಸ್ತೆ ನಿರ್ಮಾಣ ಹಾಗೂ ಸೇತುವೆ ಕಾಮಗಾರಿ ಟೆಂಡರ್​ ಪಡೆದುಕೊಂಡಿದ್ದು, ರಸ್ತೆಗೆ ಡಾಂಬರ್​ ಹಾಕಿ ಬಿಲ್​ ಪಡೆದುಕೊಳ್ಳಲು ಮುಂದಾಗಿದ್ದ. ಇದಕ್ಕೆ ಅವಕಾಶ ನೀಡದೆ ಸೇತುವೆ ಪೂರ್ಣಗೊಳಿಸಲು ಸೂಚಿಸಲಾಗಿತ್ತು. ಕಂಬಿ ಹಾಕಿ ಹೋಗಿರುವ ಗುತ್ತಿಗೆದಾರ ಈ ಕಡೆ ಬಂದೇ ಇಲ್ಲ. ಸೇತುವೆ ಕೆಲಸ ಮುಗಿಸಿಕೊಡಲು 17 ನೋಟಿಸ್​ ನೀಡಿದ್ದರೂ ಪ್ರತಿಕ್ರಿಯೆ ನೀಡಿಲ್ಲ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
  • ಮಳೆ ಬಂದರೆ ಸಮಸ್ಯೆ ತಪ್ಪಿದಲ್ಲ
    ರಸ್ತೆಗೆ ಡಾಂಬರ್​ ಹಾಕುತ್ತಿದ್ದ ಸಂದರ್ಭದಲ್ಲೆ ಸೇತುವೆ ಕೆಲಸ ಪ್ರಾರಂಭಿಸಿದ್ದರು. ಕಾಲಮಿತಿಯೊಳಗೆ ಕೆಲಸ ಮುಗಿಸಿಕೊಡಬೇಕು, ಮಳೆ ಬಂದರೆ ತೊಂದರೆ ಆಗುವ ಬಗ್ಗೆ ಗುತ್ತಿಗೆ ಸಂಸ್ಥೆಯ ಸಿಬ್ಬಂದಿ ಹಾಗೂ ಇಲಾಖಾಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಎರಡು ವರ್ಷಗಳಿಂದ ಮಳೆಗಾಲದಲ್ಲಿ ರಸ್ತೆ ದಾಟಲು ಸಮಸ್ಯೆ ಎದುರಿಸಲಾಗುತ್ತಿದೆ. ಈಗಾಗಲೇ ಮಳೆ ಶುರುವಾಗಿದ್ದು, ಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಾದರೆ ಮತ್ತೆ ಸಮಸ್ಯೆ ಎದುರಿಸಬೇಕಾಗುತ್ತದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲಸ ಮುಗಿಸಿಕೊಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಸೇತುವೆ ಕಾಮಗಾರಿ ಪೂರ್ಣಗೊಳಿಸವಂತೆ ಗುತ್ತಿಗೆದಾರನಿಗೆ ನೋಟಿಸ್​ ನೀಡಲಾಗಿದ್ದು, ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ. ಕಪು$್ಪ ಪಟ್ಟಿಗೆ ಸೇರಿಸಿ, ಮರು ಟೆಂಡರ್​ ಕರೆಯಲು ಕ್ರಮವಹಿಸಲಾಗಿದೆ.- ಮಂಜುನಾಥ್​, ಎಇಇ, ಪಿಡಬ್ಲ್ಯುಡಿ, ಕೋಲಾರ
ಸೇತುವೆ ಕಾಮಗಾರಿ ಪೂರ್ಣಗೊಳಿಸವಂತೆ ಗುತ್ತಿಗೆದಾರನಿಗೆ ನೋಟಿಸ್​ ನೀಡಲಾಗಿದ್ದು, ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ. ಕಪು$್ಪ ಪಟ್ಟಿಗೆ ಸೇರಿಸಿ, ಮರು ಟೆಂಡರ್​ ಕರೆಯಲು ಕ್ರಮವಹಿಸಲಾಗಿದೆ.- ಮಂಜುನಾಥ್​, ಎಇಇ, ಪಿಡಬ್ಲ್ಯುಡಿ, ಕೋಲಾರ
ಸೇತುವೆ ಕಾಮಗಾರಿ ಸ್ಥಗಿತದಿಂದ ತೊಂಡಾಲ, ನಾಯಕರಹಳ್ಳಿ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಮಳೆಗಾಲದಲ್ಲಿ ಯಾವುದೇ ರೀತಿ ತೊಂದರೆಯಾಗದಂತೆ ವ್ಯವಸ್ಥೆ ಮಾಡಿಕೊಡಬೇಕು.- ರವಿ, ಗ್ರಾ.ಪಂ ಸದಸ್ಯ, ತೊಂಡಾಲ
ಸೇತುವೆ ಕಾಮಗಾರಿ ಸ್ಥಗಿತದಿಂದ ತೊಂಡಾಲ, ನಾಯಕರಹಳ್ಳಿ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಮಳೆಗಾಲದಲ್ಲಿ ಯಾವುದೇ ರೀತಿ ತೊಂದರೆಯಾಗದಂತೆ ವ್ಯವಸ್ಥೆ ಮಾಡಿಕೊಡಬೇಕು.- ರವಿ, ಗ್ರಾ.ಪಂ ಸದಸ್ಯ, ತೊಂಡಾಲ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net