ಜೀತ ಪದ್ಧತಿ ನಿಷೇಧಿಸಿದ್ದು ಉಪಯುಕ್ತ

bdvt arasu
ಭದ್ರಾವತಿಯಲ್ಲಿ ಆಯೋಜಿಸಿದ್ದ ದೇವರಾಜ ಅರಸು ಜನ್ಮದಿನಾಚರಣೆಯನ್ನು ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಸದಸ್ಯ ಬಿ.ಕೆ.ಮೋಹನ್ ಮತ್ತಿತರರು ಉದ್ಘಾಟಿಸಿದರು. ಪರುಸಪ್ಪ ಕುರುಬರ, ಕೆ.ಎನ್.ಹೇಮಂತ್, ಗಂಗಣ್ಣ ಇತರರಿದ್ದರು.
Published on

ಭದ್ರಾವತಿ: ಕೃಷಿಕ ಕುಟುಂಬದಲ್ಲಿ ಬೆಳೆದ ಡಿ.ದೇವರಾಜ ಅರಸು ಅವರು ರೈತರ ಸಮಸ್ಯೆಗಳನ್ನು ಬಹು ಹತ್ತಿರದಿಂದ ನೋಡಿದ್ದ ಪರಿಣಾಮ ಅಧಿಕಾರ ಬಂದ ನಂತರ ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದು ಉಳುವ ರೈತನನ್ನೇ ಭೂ ಒಡೆಯನನ್ನಾಗಿ ಮಾಡಿದರು ಎಂದು ಬಿಇಒ ಎ.ಕೆ.ನಾಗೇಂದ್ರಪ್ಪ ಹೇಳಿದರು.

ನಗರದಲ್ಲಿ ತಾಲೂಕು ಆಡಳಿತ, ತಾಪಂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ನಗರಸಭೆಯಿಂದ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಸಾಮಾಜಿಕ ಬದಲಾವಣೆಗೆ ಮುನ್ನುಡಿ ಬರೆದ ಅರಸು ಅವರು ಕೇಂದ್ರ ಸರ್ಕಾರ ಜಾರಿಗೆ ತಂದ 20 ಅಂಶಗಳ ಕಾರ್ಯಕ್ರಮಗಳನ್ನು ರಾಜ್ಯದಲ್ಲೂ ಅಳವಡಿಸಿಕೊಂಡರು. ಜೀತ, ಮಲ ಹೊರುವ ಪದ್ಧತಿ ನಿಷೇಧಿಸಿ ಸಮಾಜಕ್ಕೆ ಅಂಟಿದ್ದ ಕಳಂಕವನ್ನು ದೂರ ಮಾಡಿದರು ಎಂದರು.

ಪೌರಾಯುಕ್ತ ಕೆ.ಎನ್.ಹೇಮಂತ್ ಮಾತನಾಡಿ, ನಾವೆಲ್ಲರೂ ಇಂದು ಜಮೀನುಗಳಲ್ಲಿ ಉಳುಮೆ ಮಾಡುತ್ತಿರುವುದಕ್ಕೆ ಅರಸು ಅವರು ಜಾರಿಗೆ ತಂದ ಭೂ ಸುಧಾರಣಾ ಕಾಯ್ದೆಯೇ ಕಾರಣ. 8 ವರ್ಷಗಳ ಕಾಲ ನಿರಂತರವಾಗಿ ಯಾವುದೇ ಅಡ್ಡಿ ಆತಂಕವಿಲ್ಲದೆ ರಾಜ್ಯವನ್ನಾಳಿದರು ಎಂದರೆ ಅವರ ಬದ್ಧತೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಮಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಸಯ್ಯದ್ ರಿಯಾಜ್, ಸದಸ್ಯ ಬಿ.ಕೆ.ಮೋಹನ್, ಆನೆಕೊಪ್ಪ ಬಸವರಾಜ್, ಚನ್ನಪ್ಪ, ತಹಸೀಲ್ದಾರ್ ಪರುಸಪ್ಪ ಕುರುಬರ, ಇಒ ಗಂಗಣ್ಣ, ಸರ್ಕಾರಿ ನೌಕರರರ ಸಂಘದ ತಾಲೂಕು ಅಧ್ಯಕ್ಷ ಸಿದ್ದಬಸಪ್ಪ, ಆಶ್ರಯ ಸಮಿತಿ ಅಧ್ಯಕ್ಷ ಜಿ.ಎಸ್.ಗೋಪಾಲ್, ಟಿ.ವೆಂಕಟೇಶ್, ಡಿಎಸ್‌ಎಸ್ ಮುಖಂಡ ಸತ್ಯ, ಚಿನ್ನಯ್ಯ, ಶಿವಬಸಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net