ಶೂ ಎಸೆವ ಯತ್ನ ಖಂಡನೀಯ

satish jarakiholi
Published on

ಕೋಲಾರ: ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ಬಿ.ಆರ್​.ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿರುವುದನ್ನು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಖಂಡಿಸಿದರು.

ಕೆಜಿಎಫ್​ ತಾಲೂಕಿನ ನಲ್ಲೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆ ಸಂಬಂಧ ಯಾವುದೇ ಕ್ರಮ ಬೇಡ ಎಂದು ಗವಾಯಿ ಅವರೇ ದೊಡ್ಡ ಮನಸ್ಸು ಮಾಡಿದ್ದಾರೆ. ಶೂ ಎಸೆಯಲೆತ್ನಿದವರೇ ಪಶ್ಚಾತ್ತಾಪಪಡಲಿ ಎಂಬುದಾಗಿ ಹೇಳಿದ್ದಾರೆ ಎಂದರು.

ಕುರುಬ ಸಮುದಾಯವನ್ನು ಎಸ್​ಟಿಗೆ ಸೇರಿಸುವ ವಿಚಾರದಲ್ಲಿ ಸೃಷ್ಟಿಯಾಗಿದ್ದ ಗೊಂದಲ ಬಗೆಹರಿದಿದೆ. ಈಗಾಗಲೇ ಈ ವಿಷಯ ಕುರಿತು ಚರ್ಚೆ ನಡೆದಿದ್ದು, ಮುಖ್ಯಮಂತ್ರಿ ಕೂಡ ಸ್ಪಷ್ಟಪಡಿಸಿದ್ದಾರೆ. ಇದು ಕೇಂದ್ರ ಸರ್ಕಾರ ಮಾಡುವಂತಹ ಕೆಲಸ ಎಂದು ತಿಳಿಸಿದರು.

ಐದು ವರ್ಷ ಮುಖ್ಯಮಂತ್ರಿ ಆಗಿರುವುದಾಗಿ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಈ ವಿಚಾರವನ್ನು ಅವರ ಬಳಿಯೇ ಕೇಳಿ, ಅವರು ಹೇಳಿದ ಮೇಲೆ ಮುಗಿಯಿತಲ್ಲವೇ ಎಂದು ತಿಳಿಸಿದರು.

ಡಿ.ಕೆ.ಶಿವಕುಮಾರ್​ ಕೂಡ ಮುಖ್ಯಮಂತ್ರಿ ಅಕಾಂಯಾಗಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಸಿ, ಈ ಬಗ್ಗೆ ಹೈಕಮಾಂಡ್​ ನಿರ್ಧಾರ ತೆಗೆದುಕೊಳ್ಳಲಿದೆ. ಜತೆಗೆ ಸಚಿವರ ಬದಲಾವಣೆ ಬಗ್ಗೆ ಚರ್ಚೆ ನಡೆದಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net