ಒಗ್ಗಟ್ಟಿದ್ದಲ್ಲಿ ಸಂಘ ಬೆಳವಣಿಗೆಯಾಗಲು ಸಾಧ್ಯ

2ss1sharatsekar maatu
Published on

ಶನಿವಾರಸಂತೆ: ಸಹಕಾರಿ ಸದಸ್ಯರ ಸಹಕಾರ ಮತ್ತು ಆಡಳಿತ ಮಂಡಳಿಯಲ್ಲಿ ಒಗ್ಗಟ್ಟು ಇದ್ಧಲ್ಲಿ ಸಂಘವು ಬೆಳವಣಿಗೆ ಸಾಧಿಸಲು ಸಹಕಾರವಾಗುತ್ತದೆ ಎಂದು ಶನಿವಾರಸಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಸಿ.ಶರತ್‌ಶೇಖರ್ ಅಭಿಪ್ರಾಯ ಪಟ್ಟರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷ ೆವಹಿಸಿ ಮಾತನಾಡಿ, ಸಂಘದ ಪ್ರಗತಿಗೆ ಸಹಕಾರಿಗಳ ಸಹಕಾರ ಪ್ರಮುಖವಾದದ್ದು. ನಮ್ಮ ಸಂಘವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಮನಗಂಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮೂಲಕ ನಮ್ಮ ಸಂಘಕ್ಕೆ ರಾಜ್ಯ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ ಜತೆಗೆ ಹತ್ತು ಸಾವಿರ ರೂ. ನಗದು ಬಹುಮಾನ ನೀಡಿದೆ ಎಂದು ಹೇಳಿದರು.

ನಮ್ಮ ಸಂಘದ ಸಹಕಾರಿ ಸದಸ್ಯರ ಪೈಕಿ ಶೇ.20 ರಷ್ಟು ಮಾತ್ರ ನಮ್ಮ ಸಂಘದಲ್ಲಿ ವ್ಯವಹಾರ ನಡೆಸುತ್ತಾರೆ. ಈ ನಿಟ್ಟಿನಲ್ಲಿ ಸಂಘದ ಸದಸ್ಯರು ಬೇರೆ ಕಡೆಯಲ್ಲಿರುವ ಬ್ಯಾಂಕ್‌ಗೆ ಹೋಗದೆ ನಮ್ಮ ಸಂಘದಲ್ಲಿ ವ್ಯವಹಾರ ನಡೆಸುವಂತೆ ಮನವಿ ಮಾಡಿದರು.

ಮಹಾಸಭೆಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೀತುಚಂದ್ರ ಸಂಘದ 2025-26ನೇ ಸಾಲಿನ ವರದಿ ಮತ್ತು ಲೆಕ್ಕ ಪರಿಶೋಧನಾ ವರದಿಯನ್ನು ಮಂಡಿಸಿದರು. ಸಂಘದಲ್ಲಿ 2025ನೇ ಸಾಲಿನಲ್ಲಿ 2004 ಮಂದಿ ಸದಸ್ಯರಿದ್ದು ಸದಸ್ಯರ ಪಾಲು 1.63,79,618 ಕೋಟಿ ರೂ. ಇದೆ. ಸಂಘದ ಕ್ಷೇಮ ನಿಧಿ, ಕಟ್ಟಡ ನಿಧಿ, ಸವಕಳಿ ನಿಧಿ ಇತರ ನಿಧಿ ಸೇರಿದಂತೆ 2025ನೇ ಸಾಲಿನಲ್ಲಿ 3,40,32,780 ರೂ. ಇರುತ್ತದೆ ಎಂದು ವರದಿ ಮಂಡನೆಯಲ್ಲಿ ತಿಳಿಸಿದರು.

ಸಂಘದ ಪ್ರಗತಿ ಬಗ್ಗೆ ಸಹಕಾರಿಗಳಾದ ಕೊಮರಪ್ಪ, ಆನಂದ್, ಗಣೇಶ್ ಮುಂತಾದವರು ಚರ್ಚಿಸಿದರು. ಸಂಘದ ಉಪಾಧ್ಯಕ್ಷೆ ಸವಿತಾ ಸತೀಶ್, ನಿರ್ದೇಶಕರಾದ ಎಸ್.ವಿ.ಜಗದೀಶ್, ಎಸ್.ಎನ್.ರಘು, ಸಿ.ಜೆ.ಗಿರೀಶ್, ವಿ.ಆರ್.ರಕ್ಷಿತ್, ಎಸ್.ಯು.ಆನಂದ್, ಹೊನ್ನರಾಜು, ವಿ.ಎಸ್.ಸುದರ್ಶನ್, ಸಿ.ಎಚ್.ರೂಪಾ, ಆಶಾರಾಣಿ, ಮಂಜಯ್ಯ, ಡಿ.ಸಿ.ಸಿ ಬ್ಯಾಂಕ್ ಮೇಲ್ವಿಚಾರಕ ತುಂಗರಾಜು, ಸಂಘದ ಸಿಇಒ ನೀತುಚಂದ್ರ, ಸಂಘದ ಸಿಬ್ಬಂದಿ ಹಾಜರಿದ್ದರು. ಸಂಘಕ್ಕೆ ಅಪೆಕ್ಸ್ ಬ್ಯಾಂಕ್ ನೀಡಿದ ರಾಜ್ಯ ಪ್ರಶಸ್ತಿ ಪತ್ರವನ್ನು ಸಂಘದ ಸಿಇಒ ನೀತುಚಂದ್ರ ಅವರಿಗೆ ಹಸ್ತಾಂತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net