ಮನೆ ಮುಂದೆ ನಿಂತಿದ್ದ ಯುವಕನ ಕತ್ತರಿಸಿದ ಹಂತಕರು; ಬೆಚ್ಚಿಬಿದ್ದ ಸ್ಥಳೀಯರು

07-murder3
Published on

ಬೆಂಗಳೂರು: ಹಳೇ ದ್ವೇಷದ ಹಿನ್ನೆಲೆಯಲ್ಲಿ ಯುವಕನನ್ನು ಮೂವರು ಹಂತಕರು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ.

ಬಸವನಗುಡಿ ಖಾಜಿ ಸ್ಟ್ರೀಟ್ ನಿವಾಸಿ ಅರ್ಬಾಜ್ ಖಾನ್(26) ಮೃತ ಯುವಕ. ಶುಕ್ರವಾರ ಮಧ್ಯಾಹ್ನ 1.30ರಲ್ಲಿ ಮನೆ ಬಳಿ ಯುವಕ ನಿಂತಿರುವಾಗ ದ್ವಿಚಕ್ರ ವಾಹನದಲ್ಲಿ ಬಂದಿರುವ ದುಷ್ಕರ್ಮಿಗಳು, ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಬಾರ್ಜ್‌ನನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ತೀವ್ರ ರಕ್ತಸ್ರಾವವಾಗಿ ಮಾರ್ಗ ಮಧ್ಯೆಯೇ ಅರ್ಬಾಜ್ ಮೃತಪಟ್ಟಿದ್ದಾನೆ. ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆಯಿದೆ. ಅರ್ಬಾಜ್ ವಿರುದ್ಧವೂ ರಾಬರಿ ಪ್ರಕರಣ ದಾಖಲಾಗಿತ್ತು. ಟಿಪ್ಪುನಗರದ ಮೊಯ್ಸಿನ್ ಜತೆಗೆ ಅರ್ಬಾಜ್ ದ್ವೇಷ ಕಟ್ಟಿಕೊಂಡಿದ್ದ ಎನ್ನಲಾಗಿದೆ. ಈ ದ್ವೇಷದಿಂದಲೇ ಮೋಯ್ಸಿನ್ ಮತ್ತು ಸಹಚರರು ಅರ್ಬಾಜ್‌ನನ್ನು ಕೊಲೆ ಮಾಡಿರುವ ಸಾಧ್ಯತೆಯಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಸವನಗುಡಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net