ಕಾಲೇಜುಗಳಲ್ಲಿ ಕಳ್ಳರ ಕೈಚಳಕ

16 SARAG 7
Published on
  • ಸರಗೂರು: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಎಂಎಂಕೆ ಪಿಯು ಕಾಲೇಜಿನಲ್ಲಿ ಶುಕ್ರವಾರ ತಡರಾತ್ರಿ ಕಳ್ಳತನ ನಡೆದಿದ್ದು, ಸಾವಿರಾರು ರೂ. ಮೌಲ್ಯದ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕಳ್ಳರು ದೋಚಿದ್ದಾರೆ.

  • ತಾಲೂಕಿನ ತುಂಬಸೋಗೆ ಗ್ರಾಮದ ಎಂಎಂಕೆ ಕಾಲೇಜಿನಲ್ಲಿರುವ ಕಂಪ್ಯೂಟರ್ ಕೊಠಡಿಯ ಬಾಗಿಲ ಬೀಗ ಮುರಿದು ಒಳಗೆ ನುಗ್ಗಿರುವ ಕಳ್ಳರು ಸಿಸಿ ಕ್ಯಾಮರಾ ಉಪಕರಣ ನಾಶಪಡಿಸಿ, ಬೀರುನಲ್ಲಿದ್ದ 2 ಸಾವಿರ ರೂ.ಗೂ ಅಧಿಕ ನಗದನ್ನು ದೋಚಿದ್ದಾರೆ.

  • ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೂ ನುಗ್ಗಿರುವ ಕಳ್ಳರು ಸಿಸಿ ಕ್ಯಾಮರಾದ ಡಿಆರ್, ಹಾರ್ಡ್‌ಡಿಸ್ಕ್, ಮಾನಿಟರ್ ಹಾಗೂ ಹೊರಭಾಗದಲ್ಲಿ ಅಳವಡಿಸಿದ್ದ ಎರಡು ಸಿಸಿ ಕ್ಯಾಮರಾ ಇತ್ಯಾದಿಗಳನ್ನು ಹೊತ್ತ್ತೊಯ್ದಿದ್ದಾರೆ.

  • ಸ್ಥಳಕ್ಕೆ ಶನಿವಾರ ಬೆಳಗ್ಗೆ ಭೇಟಿ ನೀಡಿದ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಬ್‌ಇನ್‌ಸ್ಪೆಕ್ಟರ್ ಗೋಪಾಲ್, ಸಿಬ್ಬಂದಿ ಇಮ್ರಾನ್, ಕೃಷ್ಣ ಪರಿಶೀಲನೆ ನಡೆಸಿದರು. ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಸಿಬ್ಬಂದಿ ತಪಾಸಣೆ ನಡೆಸಿದರು. ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net