

ಜೈಲಿನಿಂದ ಬಿಡುಗಡೆಯಾಗಿ 5 ದಿನಕ್ಕೇ ಸರಗಳ್ಳತನ ಮಾಡಿದ ಇಬ್ಬರು ಖದೀಮರು ಕುವೆಂಪುನಗರ ಪೊಲೀಸರ ಅತಿಥಿಯಾಗಿದ್ದಾರೆ. ಬಂಧಿತರಿಂದ 90 ಸಾವಿರ ಮೌಲ್ಯದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ ಸುಜುಕಿ ಆಕ್ಸಿಸ್ ಸ್ಕೂಟರ್ ವಶಪಡಿಸಿಕೊಂಡಿದ್ದಾರೆ.
ಚಾಮರಾಜನಗರದ ಮಂಜ@ಕಳ್ ಮಂಜ(32) ಹಾಗೂ ಮೈಸೂರಿನ ಚಂದನ್ @ ಚಂದು (29) ಬಂಧಿತರು.ಸರಗಳುವು ಪ್ರಕರಣದಲ್ಲಿ ಸಾಕಷ್ಟು ಬಾರಿ ಜೈಲು ವಾಸ ಅನುಭವಿಸಿರುವ ಆರೋಪಿಗಳು ಅಕ್ಟೋಬರ್ 25 ರಂದು ಬಿಡುಗಡೆ ಆಗಿದ್ದಾರೆ.ಕೇವಲ 5 ದಿನಗಳಲ್ಲಿ ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದು ಹೋಗುತ್ತಿದ್ದ ವೃದ್ದ ಮಹಿಳೆ ವಿಜಯಲಕ್ಷ್ಮಿ ಎಂಬುವರ ಸರ ಕಸಿದು ಪರಾರಿಯಾಗಿದ್ದಾರೆ.ಕೃತ್ಯಕ್ಕೆ ಸುಜುಕಿ ಆಕ್ಸಿಸ್ ಸ್ಕೂಟರ್ ಬಳಸಿದ್ದಾರೆ.ಸರಗಳುವು ಪ್ರಕರಣ ದಾಖಲಿಸಿಕೊಂಡ ಕುವೆಂಪುನಗರ ಠಾಣೆ ಪೊಲೀಸರು ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನ ಪರಿಶೀಲಿಸಿ ಆರೋಪಿಗಳ ಜಾಡು ಹಿಡಿದಿದ್ದಾರೆ.ದಟ್ಟಗಳ್ಳಿಯ ಬಾರ್ ಒಂದರ ಸಮೀಪ ನಿಂತಿದ್ದ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.ಕೃತ್ಯಕ್ಕೆ ಬಳಸಿದ ಸ್ಕೂಟರ್ ಸಹ ಕಳುವು ಮಾಡಿರುವುದು ತೆನಿಖೆಯಲ್ಲಿ ತಿಳಿದುಬಂದಿದೆ.ಬಂಧಿತ ಆರೋಪಿಗಳು ಮೈಸೂರು ಜಿಲ್ಲೆಯಾದ್ಯಂತ ಸುಮಾರು 30 ಕ್ಕೂ ಹೆಚ್ಚು ಸರಗಳುವು ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತಿಳಿದು ಬಂದಿದೆ.ಕಳ್ಳತನ ಮಾಡಿದ ಸ್ಕೂಟರ್ ನಲ್ಲಿ ಸರಗಳುವು ಮಾಡಿದ ಖದೀಮರ ಕೇವಲ 24 ಗಂಟೆಯೊಳಗೆ ಪೊಲೀಸರ ಅತಿಥಿಯಾಗಿದ್ದಾರೆ.
ಅಪರಾಧ ಮತ್ತು ಸಂಚಾರ ಡಿಸಿಪಿ ರವರಾದ ಎಸ್.ಜಾಹ್ನವಿ ರವರ ಮಾರ್ಗದರ್ಶನದಲ್ಲಿ ಕೆ.ಆರ್.ವಿಭಾಗದ ಎಸಿಪಿ ರಮೇಶ್ ಕುಮಾರ್ ಉಸ್ತುವಾರಿಯಲ್ಲಿ ಕುವೆಂಪುನಗರ ಇನ್ಸ್ಪೆಕ್ಟರ್ ಎಲ್.ಅರುಣ್ ಪಿಎಸ್ಸೈ ಗಳಾದ ಗೋಪಾಲ್ ಮತ್ತು ಮದನ್ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಆನಂದ್,ಮಂಜುನಾಥ್ ಕೆ.ಟಿ,ಮಹೇಶ್ವರ,ಮಂಜುನಾಥ್ ಎಂಪಿ,ಮಂಜು ಹೆಚ್ ವಿ,ನಾಗೇಶ್,ಯಶವಂತ್,ಹಜರತ್ ಹಾಗೂ ಸುರೇಶ್ ರವರು ಕಾರ್ಯಾಚರಣೆಯನ್ನ ಯಶಸ್ವಿಗೊಳಿಸಿದ್ದಾರೆ.
ಪತ್ತೆ ಕಾರ್ಯಾಚರಣೆಯನ್ನ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವರಾದ ಮುತ್ತುರಾಜ್ ಹಾಗೂ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಪ್ರಶಂಸಿಸಿದ್ದಾರೆ.