

ಬೆಂಗಳೂರು: ಮಹಿಳೆಯನ್ನು ಕೊಂದಿದ್ದ ಸಾಫ್ಟ್‌ವೇರ್ ಇಂಜಿನಿಯರ್‌ನನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೇರೋಹಳ್ಳಿ ಮೂಲದ ನವೀನ್(೨೮) ಬಂಧಿತ. ಆರೋಪಿ. ಏ.೧೯ರಂದು ಎಂ.ಶೋಭಾ(೪೮) ಎಂಬಾಕೆಯನ್ನು ಕೊಲೆಗೈದು, ಆಕೆಯ ಕಾರು ಸಮೇತ ಪರಾರಿಯಾಗಿದ್ದ. ಈ ಸಂಬಂಧ ಶೋಭಾ ಅವರ ಪುತ್ರಿ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶೋಭಾ ಪತಿ ಚಿಕ್ಕಪೇಟೆಯಲ್ಲಿ ವಾಸವಾಗಿದ್ದು, ಈಕೆ ಕೊಡಿಗೇಹಳ್ಳಿಯಲ್ಲಿ ಡ್ರೈವಿಂಗ್ ಶಾಲೆ ತೆರೆದು, ೨ನೇ ಪುತ್ರಿಯ ಜತೆ ಗಣಪತಿನಗರದಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದರು. ಮೊದಲ ಪುತ್ರಿಗೆ ಮದುವೆಯಾಗಿದ್ದು, ಆಕೆ ಪತಿ ಜತೆ ವಾಸವಾಗಿದ್ದಾರೆ. ಏ.೪ರಂದು ತಮ್ಮ ೨ನೇ ಪುತ್ರಿಗೂ ಮದುವೆ ಮಾಡಿದ್ದರು. ಹೀಗಾಗಿ ಮನೆಯಲ್ಲಿ ಒಬ್ಬರೇ ಇರುತ್ತಿದ್ದರು. ಈ ನಡುವೆ ಶೋಭಾ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯವಾಗಿದ್ದು, ಈ ವೇಳೆ ಮೈಸೂರು ಮೂಲದ ಟೆಕ್ಕಿ ನವೀನ್ ಪರಿಚಯವಾಗಿದೆ. ಜತೆಗೆ ಈತ ಮಾಡುತ್ತಿದ್ದ ರೀಲ್ಸ್‌ಗಳನ್ನು ಈಕೆ ಲೈಕ್ ಮಾಡುತ್ತಿದ್ದರು. ಬಳಿಕ ಇಬ್ಬರು ಆನ್‌ಲೈನ್‌ನಲ್ಲಿ ಚಾಟಿಂಗ್ ಆರಂಭಿಸಿದ್ದಾರೆ. ನಂತರ ಪರಸ್ಪರ ಮೊಬೈಲ್ ನಂಬರ್ ಬದಲಾಯಿಸಿಕೊಂಡು, ಕರೆ ಹಾಗೂ ವಾಟ್ಸ್‌ಆ್ಯಪ್ ಸಂದೇಶ ಮಾಡುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಆತ್ಮೀಯತೆ ಬೆಳೆದಿದೆ. ಬಳಿಕ ಕೆಲ ತಿಂಗಳ ಹಿಂದೆ ಇಬ್ಬರು ಆರ್.ಟಿ.ನಗರದ ಹೋಟೆಲ್‌ವೊಂದರಲ್ಲಿ ಮೊದಲ ಬಾರಿ ಭೇಟಿಯಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅತೀಯಾದ ಲೈಂಗಿಕ ಕ್ರಿಯೆಗೆ ಪೀಡಿಸಿದಕ್ಕೆ ಹತ್ಯೆ!
ಏ.೧೮ರಂದು ಪ್ರಿಯಕರ ನವೀನ್‌ಗೆ ಕರೆ ಮಾಡಿದ ಶೋಭಾ, ರಾತ್ರಿ ಮನೆಗೆ ಬರುವಂತೆ ಆಹ್ವಾನಿಸಿದ್ದಾರೆ. ಅದರಂತೆ ರಾತ್ರಿ ೧೦ ಗಂಟೆ ಸುಮಾರಿಗೆ ಹೆಬ್ಬಾಳ ಬಳಿ ಬಂದ ನವೀನ್‌ನನ್ನು ಈಕೆಯೇ ತನ್ನ ಕಾರಿನಲ್ಲಿ ಮನೆಗೆ ಕರೆ ತಂದಿದ್ದಾರೆ. ಬಳಿಕ ಇಬ್ಬರು ಊಟ ಮುಗಿಸಿದ್ದು, ಈಕೆ ಮದ್ಯ ಸೇವಿಸಿದ್ದಾಳೆ. ಆರೋಪಿ ಸೇವನೆ ಮಾಡಿರಲ್ಲಿಲ. ಬಳಿಕ ಶೋಭಾ, ನವೀನ್ ಜತೆ ದೈಹಿಕ ಸಂಪರ್ಕ ಬೆಳೆಸುವಂತೆ ಪ್ರಚೋಸಿದ್ದಾರೆ. ಆದರೆ, ಆತ ನಿರಾಕರಿಸಿದ್ದಾನೆ. ಕೆಲ ಹೊತ್ತಿನ ಬಳಿಕ ನವೀನ್‌ನನ್ನು ಮತ್ತೊಮ್ಮೆ ಪ್ರಚೋದಿಸಿದ ಶೋಭಾ ಆತನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಆ ಬಳಿಕ ಮತ್ತೊಮ್ಮೆ ನವೀನ್ ಬಳಿ ಬಂದು ಅಶ್ಲೀಲ ವಿಡಿಯೋ ತೋರಿಸಿ, ಈ ಮಾದರಿಯಲ್ಲಿ ಲೈಂಗಿಕ ಕ್ರಿಯೆ ನಡೆಸೋಣ ಎಂದು ಪೀಡಿಸಿದ್ದಾಳೆ. ಆಗ ನವೀನ್ ನಿರಾಕರಿಸಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿದ್ದು, ಅದು ವಿಕೋಪಕ್ಕೆ ಹೋಗಿದೆ. ಅಲ್ಲದೆ, ಆತನ ಗಾಯಗೊಂಡಿದ್ದ ಕೈಗೆ ಮತ್ತಷ್ಟು ಗಾಯಗೊಳಿಸಿದ್ದಾರೆ. ಅದರಿಂದ ಕೋಪಗೊಂಡ ಆರೋಪಿ, ಶೋಭಾ ಅವರ ಕುತ್ತು ಹಿಸುಕಿ ಕೊಲೆಗೈದು, ಬಳಿಕ ಮನೆ ಮುಂಭಾಗ ನಿಂತಿದ್ದ ಶೋಭಾ ಕಾರಿನಲ್ಲೇ ಪರಾರಿಯಾಗಿದ್ದ. ಮರು ದಿನ ಶೋಭಾರ ೨ನೇ ಪುತ್ರಿ ಕರೆ ಮಾಡಿದಾಗ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ಅನುಮಾನಗೊಂಡು ಮನೆ ಬಳಿ ಬಂದಾಗ ಘಟನೆ ಬೆಳಕಿಗೆ ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.