ಆ ಟಾಲಿವುಡ್​ ಹೀರೋ ನನಗೆ ಕಿರುಕುಳ ಕೊಟ್ಟಿದ್ದ; ನಟನ ಕರಾಳ ಮುಖ ತೆರೆದಿಟ್ಟ ಹಾಟ್​ ಬ್ಯೂಟಿ! | Dark Side

dk - 2025-02-21T124818.178
Published on

Dark Side: ಸಿನಿಮಾ ಕ್ಷೇತ್ರ ಎಲ್ಲರಿಗೂ ಒಂದೇ ರೀತಿಯಾಗಿ ಇರುವುದಿಲ್ಲಿ ಅಲ್ಲದೆ, ಚಿತ್ರರಂಗ ಕಾಂಪಿಟೆಟಿವ್​​ ಕ್ಷೇತ್ರವಾಗಿ ಎಷ್ಟೋ ವರ್ಷಗಳು ಕಳೆದಿದೆ. ಅಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂದರೆ ಪರಿಶ್ರಮದ ಜತೆ ಸಲ್ಪ ಅದೃಷ್ಟನೂ ಇರಬೇಕಾಗುತ್ತದೆ.ಇನ್ನು ದುರಾದೃಷ್ಟದಿಂದ ಅನೇಕರು ಚಿತ್ರಂಗದಿಂದ ದೂರ ಸರಿದ ಸಾಕಷ್ಟು ನಿರ್ದೇಶನಗಳಿವೆ. ಇದೀಗ ಅಂಥೆದ್ದೆ ನಿರ್ದಶನವೆಬಂತೆ ಟಾಲಿವುಡ್​ ಟಾಪ್​ ನಟಿ ಕೆಲ ಕಾರಣದಿಂದ ದೂರವಾಗಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿದ ಆಕೆ ಟಾಲಿವುಡ್​ನಲ್ಲಿ ಒಬ್ಬ ನಟನಿಂದ ಬಾಡಿಶೇಮಿಂಗ್​ಗೆ ಒಳಗಾಗಿದ್ದೆ ಎಂದಿದ್ದಾರೆ.

ನಾವು ಹೇಳೋಕೆ ಹೊರಟಿರುವುದು, ಒಂದು ಕಾಲದಲ್ಲಿ ವೃತ್ತಿ ಜೀವನದಲ್ಲಿ ಉತ್ತುಂಗದಲ್ಲಿದ್ದ ನಟಿ ಶ್ವೇತ ಬಸು ಪ್ರಸಾದ್​. ಹೌದು, ತಮ್ಮ ಮೊದಲ ಚಿತ್ರದಲ್ಲೇ ಉತ್ತಮ ಯಶಸ್ಸನ್ನು ಪಡೆದ ಶ್ವೇತಾ ಬಸು ಪ್ರಸಾದ್. ''ಕೊತ್ತ ಬಂಗಾರು ಲೋಕಂ(Kotta Bangaru Lokam) ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಅವರು ತಮ್ಮ ಮೊದಲ ಚಿತ್ರದಲ್ಲೇ ಹಿಟ್ ಆದ ಈಕೆ ಪಡ್ಡೆ ಹುಡುಗರ ಕನಸಿನ ರಾಣಿಯಾದಳು.

ಅದಾದ ಬಳಿಕ, ಶ್ವೇತಾ ಒಂದು ಅಥವಾ ಎರಡು ಚಿತ್ರಗಳನ್ನು ಮಾಡಿದರು. ಎಲ್ಲರೂ ಅವಳು ಸ್ಟಾರ್ ಹೀರೋಯಿನ್ ಆಗುತ್ತಾಳೆಂದು ಭಾವಿಸಿದ್ದರು, ಆದರೆ ಅವಳು ವೇಶ್ಯಾವಾಟಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಳು. ಕೆಲ ತಿಂಗಳ ಜೈಲುವಾಸ ಬಳಿಕ ಹೊರ ಬಂದ ನಟಿ, ತನ್ನ ಯಾವುದೇ ತಪ್ಪಿಲ್ಲದಿದ್ದರೂ ಈ ಪ್ರಕರಣದಲ್ಲಿ ತನ್ನನ್ನು ಸಿಲುಕಿಸಲಾಗಿದೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ. ಅಲ್ಲದೆ, ಅವರು ಮದುವೆಯಾದ ನಂತರವೂ ಆ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ.

ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ಶ್ವೇತಾ ಬಸು ಪ್ರಸಾದ್​ , '' ಒಬ್ಬ ನಾಯಕ ತನ್ನ ಹಾಟ್‌ನೆಸ್ ಬಗ್ಗೆ ಕಾಮೆಂಟ್ ಮಾಡುವ ಮೂಲಕ ಕಿರುಕುಳ ನೀಡಿದ್ದಾನೆ. ನಾನು ತೆಲುಗು ಸಿನಿಮಾ ಮಾಡುವಾಗ, ಆ ನಾಯಕ ತನ್ನ ಜತೆ ನಟಿಸುವ ನಟಿಯರ ಬಗ್ಗೆ ಕೆಟ್ಟದ್ದಾಗಿ ಕಾಮೆಂಟ್​ ಮಾಡುತ್ತಿದ್ದರು'' ಎಂದಿದ್ದಾರೆ.

ಅವನು ಪ್ರತಿದಿನ ನನ್ನ ಬಗ್ಗೆ ಕಾಮೆಂಟ್ ಮಾಡುತ್ತಿದ್ದನು ಮತ್ತು ಅದು ನನಗೆ ನಿಜವಾಗಿಯೂ ತೊಂದರೆ ಕೊಡುತ್ತಿತ್ತು. ಅವರು ತೆಲುಗು ನಾಯಕರಾಗಿದ್ದರೂ, ಅವರಿಗೆ ತೆಲುಗು ಬರುವುದಿಲ್ಲ ಎಂದು ಆತ ಯಾರು ಎಂಬುವುದನ್ನು ಹೇಳದೇ ಪರೋಕ್ಷವಾಗಿ ಅತ ಮುಖವಾಡ ತೆರದಿಟ್ಟಿದ್ದಾರೆ.

ಇನ್ನು ಶ್ವೇತಾ ಬಸು ಪ್ರಸಾದ್ ಸದ್ಯಕ್ಕೆ ಬಾಲಿವುಡ್​ ಸಿನಿಮಾಗಳಲ್ಲಿ ನಟಿಸುತ್ತಿದ್ದು, ವೆಬ್​ ಸರಣಿಗಳಲ್ಲಿಯೂ ಮಿಂಚುತ್ತಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net