VIDEO | ಕಾವೇರಿ ವಿವಾದ; ಡಿಸಿ ಕಚೇರಿ ಎದುರು ತರ್ಪಣ ಬಿಟ್ಟ ತಮಿಳುನಾಡು ರೈತರು

Untitled design - 2023-09-26T134645.214
Published on

ತಂಜಾವೂರು: ತಮಿಳುನಾಡು ಮತ್ತು ಕರ್ನಾಟಕದ ನಡುವೆ ಕಾವೇರಿ ವಿವಾದ ತಾರಕಕ್ಕೇರಿದ್ದು, ಎರಡು ರಾಜ್ಯಗಳ ರೈತರು ವಿವಿಧ ರೀತಿಯ ಪ್ರತಿಭಟನೆಗಳನ್ನು ನಡೆಸುವ ಮುಖೇನ ತಮ್ಮ ತಮ್ಮ ವಿರೋಧವನ್ನು ತೀವ್ರವಾಗಿ ವ್ಯಕ್ತಪಡಿಸುತ್ತಿದ್ದಾರೆ.

ತಮಿಳುನಾಡಿಗೆ ಕಾವೇರಿ ನೀರನ್ನು ಬಿಡಬೇಕು ಎಂದು ಆಗ್ರಹಿಸುತ್ತಿರುವ ತಂಜಾವೂರಿನ ವಿವಿಧ ಭಾಗಗಳ ರೈತರು, ಜಿಲ್ಲಾಧಿಕಾರಿಗಳ ಕಚೇರಿ ಎದುರು ಕುಳಿತು ತರ್ಪಣ ನಡೆಸಿದ್ದಾರೆ. ಈ ಮೂಲಕ ಕುರುವಾಯಿ ಮತ್ತು ಸಾಂಬಾ ಬೆಳೆಗೆ ಅಗತ್ಯವಿರುವ ತಮಿಳುನಾಡು ಪಾಲಿನ ಕಾವೇರಿ ನೀರನ್ನು ನಮಗೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಇದೇ ರೀತಿಯಲ್ಲಿ ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ರೈತರ ಗುಂಪೊಂದು ಸತ್ತ ಇಲಿಗಳನ್ನು ಬಾಯಿಯಲ್ಲಿ ಹಿಡಿದುಕೊಂಡು ಕರ್ನಾಟಕ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದು, ಕರ್ನಾಟಕದಿಂದ ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಆಗ್ರಹಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net