ಗಲ್ಲಾಪೆಟ್ಟಿಗೆಯಲ್ಲಿ ತಂಗಲಾ ನ್ ಸದ್ದು..3ನೇ ದಿನದ ಕಲೆಕ್ಷನ್ ಎಷ್ಟು ಗೊತ್ತಾ?

thangaalaan
Published on

ನವದೆಹಲಿ: ಈ ಬಾರಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭಕ್ಕೆ ಬಿಡುಗಡೆಯಾದ ಹಲವು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದ್ದು, ಹಿಂದಿ ಜೊತೆಗೆ ದಕ್ಷಿಣದ ಚಿತ್ರಗಳ ಪೈಪೋಟಿ ನೀಡುತ್ತಿರುವುದು ಕಂಡುಬಂದಿದೆ.

ರಾಜ್‌ಕುಮಾರ್ ರಾವ್ ಮತ್ತು ಶ್ರದ್ಧಾ ಕಪೂರ್ ಅಭಿನಯದ 'ಸ್ತ್ರೀ 2' ಚಿತ್ರದ ಅಬ್ಬರ ಜೋರಾಗಿದೆ. ಈ ಚಿತ್ರವು ಮೊದಲ ದಿನವೇ ಭಾರಿ ಲಾಭ ಗಳಿಸುವ ಮೂಲಕ ತನ್ನನ್ನು ತಾನು ಸ್ಥಾಪಿಸಿಕೊಂಡಿದೆ. ಆದರೆ ಅದರೊಂದಿಗೆ ಬಿಡುಗಡೆಯಾದ ಇತರ ಚಲನಚಿತ್ರಗಳು ಸಹ ಕಡಿಮೆ ಇಲ್ಲದಂತೆ ಮುನ್ನುಗುತ್ತಿವೆ. ಅದರಲ್ಲಿ ಚಿಯಾನ್ ವಿಕ್ರಮ್ ಅವರ 'ತಂಗಲಾನ್' ಕೂಡ ಒಂದು.

'ಮಿಸ್ಟರ್ ಬಚ್ಚನ್', 'ನನಕುಜಿ', 'ಕೃಷ್ಣಂ ಪ್ರೇಣಯ ಸಖಿ', ' ತಂಗಲಾ ನ್ ', 'ಡಿಮೊಂಟೆ ಕಾಲೋನಿ 2' ಮತ್ತು ' ಡಬಲ್ ಸ್ಮಾರ್ಟ್ ' ಚಿತ್ರಗಳನ್ನು ಒಳಗೊಂಡಂತೆ 5 ಕ್ಕೂ ಹೆಚ್ಚು ಸೌತ್ ಚಲನಚಿತ್ರಗಳು ಆಗಸ್ಟ್ 15 ರಂದು ಬಿಡುಗಡೆಯಾಗಿವೆ. ಈ ಎಲ್ಲದರ ನಡುವೆ ಹೆಚ್ಚು ಸದ್ದು ಮಾಡುತ್ತಿರುವ ಚಿತ್ರವೆಂದರೆ ತಂಗಲನ್, ಇದರಲ್ಲಿ ಚಿಯಾನ್ ವಿಕ್ರಮ್ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ.

'ತಂಗಲಾನ್' 1850ರ ಹಿನ್ನೆಲೆಯ ಸಿನಿಮಾ. ಚಿತ್ರ ಬಿಡುಗಡೆಗೂ ಮುನ್ನವೇ ನಿಷೇಧವನ್ನು ಎದುರಿಸಿತ್ತು. ಆದಾಗ್ಯೂ, ನಿಷೇಧವನ್ನು ಹಿಂತೆಗೆದುಕೊಂಡ ನಂತರ, ಇದು ಆರಂಭಿಕ ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆಯನ್ನು ಕಾಣುತ್ತಿದೆ. ಆಗಸ್ಟ್ 15 ರಂದು ಬಿಡುಗಡೆಯಾದ ಚಿತ್ರಗಳಲ್ಲಿ ಅತ್ಯಧಿಕ ಗಳಿಕೆಯನ್ನು ಸಾಧಿಸಿದೆ.

ತಂಗಲಾನ್ ಮೊದಲ ದಿನ 13.3 ಕೋಟಿ ರೂ.ಗಳಿಕೆ ಕಂಡಿದೆ. ಆದರೆ, ಶುಕ್ರವಾರ ಗಳಿಕೆಯಲ್ಲಿ ಕುಸಿತ ಕಂಡುಬಂದಿದೆ. ಅಂದು 4.75 ಕೋಟಿ ರೂ.ಗಳಿಸಿದೆ. ಶನಿವಾರ, ಮತ್ತೊಮ್ಮೆ ಅದರ ಸಂಗ್ರಹಣೆಯಲ್ಲಿ ಜಿಗಿತ ಕಂಡುಬಂದಿದ್ದು, 5.75 ಕೋಟಿ ರೂ. ಗಳಿಸಿದೆ. ಇದರೊಂದಿಗೆ ಚಿತ್ರದ ಒಟ್ಟು ಗಳಿಕೆ 23.80 ಕೋಟಿ ಆಗಿದೆ ಎಂದು ವರದಿಯಾಗಿದೆ.

'ತಂಗಲಾನ್​' ಸದ್ಯ ದಕ್ಷಿಣದ ದೊಡ್ಡ ಸಿನಿಮಾಗಳಲ್ಲಿ ಒಂದಾಗಿದೆ. ಸಂಜಯ್ ದತ್ ಅವರ 'ಡಬಲ್ ಸ್ಮಾರ್ಟ್' ಮತ್ತು ವಿಕ್ರಮ್ ತೇಜಾ ಅವರ 'ಮಿಸ್ಟರ್ ಬಚ್ಚನ್' ಗಳಿಕೆಯಲ್ಲಿ ಹಿಂದೆ ಬಿದ್ದಿವೆ. ಮಿಸ್ಟರ್ ಬಚ್ಚನ್ ಚಿತ್ರದ ಕಲೆಕ್ಷನ್ ಮೂರು ದಿನದಲ್ಲಿ 7.35 ಕೋಟಿ ರೂ. ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net