ಒಂದು ವರ್ಷದ ಮಗುವಿನೊಂದಿಗೆ ಬೃಹತ್​​​ ಕಟ್ಟಡದಿಂದ ಜಿಗಿದ ಮಹಿಳೆ

bui
Published on

ಮಹಾರಾಷ್ಟ್ರ: ಒಂದು ವರ್ಷದ ಮಗುವಿನೊಂದಿಗೆ ಮಹಿಳೆಯೊಬ್ಬರು ಬೃಹತ್​​ ಕಟ್ಟಡದಿಂದ ಜಿಗಿದ್ದು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪುಣೆ ನಗರದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಮುಂಜಾನೆ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಕೌಟುಂಬಿಕ ವಿಚಾರಕ್ಕಾಗಿ ತನ್ನ ಪತಿಯ ಜತೆಗೆ ಜಗಳವಾಡಿದ್ದಾರೆ. ಈ ಕಾರಣಕ್ಕೆ ಆಕೆ ಬೃಹತ್​​ ಕಟ್ಟಡದ ಮೇಲಿನಿಂದ ಜಿಗಿದ್ದು ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿಸಲಾಗಿದೆ.


ಕ್ಷಾ ಬಂಧನ ದಿನದಂದು ಪ್ರಿಯಾಂಕಾ ಮೋಹಿತೆ ತನ್ನ ಸಹೋದರಿಯ ಮನೆಗೆ ಹೋಗಲು ಬಯಸಿದ್ದು, ಆದರೆ ಇದಕ್ಕೆ ಆಕೆಯ ಪತಿ ಮಗುವಿನೊಂದಿಗೆ ಅಷ್ಟು ದೂರ ಪ್ರಯಾಣಿಸದಂತೆ ಸಲಹೆ ನೀಡಿದ್ದಾನೆ. ಇದರಿಂದ ದಂಪತಿ ನಡುವೆ ತೀವ್ರ ವಾಗ್ವಾದ ನಡೆದಿದೆ ಎಂದು ಹೇಳಲಾಗಿದೆ.


ಶುಕ್ರವಾರ ಮುಂಜಾನೆ 1.30ರ ಸುಮಾರಿಗೆ ತಮ್ಮ ಫ್ಲಾಟ್‌ನ ಬಾಲ್ಕನಿಯಿಂದ ತಮ್ಮ ಮಗನೊಂದಿಗೆ ಹಾರಿ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು. ಶಬ್ದ ಕೇಳಿ ತಕ್ಷಣ ಕಟ್ಟಡದ ಇತರ ನಿವಾಸಿಗಳು ಹೊರಗೆ ಬಂದಿದ್ದಾರೆ.


ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿ-ಮಗನನ್ನು ನೋಡಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಆಸ್ಪತ್ರೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net