ತಮನ್ನಾ ಮದುವೆ ಫಿಕ್ಸ್​​; ಇಬ್ಬರ ಮನೆಯವರಿಂದಲೂ ಮದುವೆಯ ದಿನಾಂಕದ ಬಗ್ಗೆ ಮಾತುಕತೆ..!

666
Published on

ಮುಂದಿನ ವರ್ಷ ತಮನ್ನಾ ಹಾಗು ವಿಜಯ್ ವರ್ಮಾ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಹಾರಿದಾಡುತ್ತಿವೆ. ಚಲನಚಿತ್ರಗಳ ಹೊರತಾಗಿ, ವೆಬ್ ಸರಣಿಯತ್ತ ಗಮನ ಹರಿಸುತ್ತಿರುವ ತಮನ್ನಾ, ಲಸ್ಟ್ ಸ್ಟೋರಿ 2 ವೆಬ್ ಸರಣಿಯಲ್ಲಿ ನಟಿಸಿದಾಗ ನಟ ವಿಜಯ್ ವರ್ಮಾ ಅವರೊಂದಿಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಇದಾದ ಬಳಿಕ ಇತ್ತೀಚೆಗಷ್ಟೇ ಅವರ ಪೋಷಕರು ಇಬ್ಬರಿಗೂ ಮದುವೆ ಮಾಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.


"ನಾನು ನಟಿಸಲು ಪ್ರಾರಂಭಿಸಿದಾಗ ಹತ್ತು ವರ್ಷ ಸಿನಿಮಾದಲ್ಲಿ ನಟಿಸಿದರೆ ಸಾಕು ಎಂಬ ಮನಸ್ಥಿತಿಯಲ್ಲಿದ್ದೆ. ಹೇಗಾದರೂ ಮಾಡಿ 30ನೇ ವಯಸ್ಸಿನಲ್ಲಿ ಮದುವೆಯಾಗಿ ಮಗುವನ್ನು ಪಡೆಯುತ್ತೇನೆ ಎಂದು ಭಾವಿಸಿದ್ದೆ. ಆದರೆ ಈಗ 30 ವರ್ಷ ದಾಟಿದರೂ ಸಿನಿಮಾದಲ್ಲಿ ಬ್ಯುಸಿಯಾಗಿದ್ದೇನೆ ಎಂದು ತಮನ್ನಾ ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.


ಇನ್ನು ಮದುವೆಗೂ ಮುನ್ನ ಕೆಲ ಸಿದ್ಧತೆಗಳನ್ನ ನಾವು ಮಾಡಿಒಕೊಂಡಿರಬೇಕು. ಕೆಲವು ಜವಾಬ್ದಾರಿಗಳು ಬೇಕಾಗುತ್ತವೆ. ನಾವು ಅದಕ್ಕೆ ಸಿದ್ಧರಾಗಿರಬೇಕು. ಹಾಗಾಗಿ ಯಾವಾಗ ನಾನು ಮದುವೆಗೆ ಸಿದ್ಧ ಎಂದು ಅನಿಸುತ್ತದೋ ಆಗ ಖಂಡಿತ ಮದುವೆಯಾಗುತ್ತೇನೆ ಎಂದಿದ್ದಾರೆ. ತಮನ್ನಾ ಈಗ ಮದುವೆಯಾಗುವ ಹುಮ್ಮಸ್ಸಿನಲ್ಲಿದ್ದಾರೆ, ಹಾಗಾಗಿ ಮದುವೆಯ ನಂತರ ಚಿತ್ರರಂಗದಿಂದ ದೂರ ಉಳಿದು ಮಗು ಮತ್ತು ಕುಟುಂಬದೊಂದಿಗೆ ಸಮಯ ಕಳೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.


ಸದ್ಯಕ್ಕೆ ಇಬ್ಬರ ಮನೆಯವರೂ ಮುಂದಿನ ವರ್ಷ ಮದುವೆಗೆ ದಿನಾಂಕ ಗೊತ್ತುಪಡಿಸಿದ್ದಾರೆ ಎನ್ನಲಾಗಿದ್ದು, ಪೋಷಕರು ಇಬ್ಬರಿಗೂ ಮದುವೆ ಮಾಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.


ಮನ್ನಾ ವಿಜಯ್, ಅಜಿತ್, ಸೂರ್ಯ ಸೇರಿದಂತೆ ಅನೇಕ ಪ್ರಮುಖ ನಟರ ಎದುರು ನಟಿಸಿ ಫೇಮಸ್​​ ಆಗಿದ್ದಾರೆ. ಜತೆಗೆ ಬಾಹುಬಲಿ ಚತ್ರ ತಮನ್ನಾ ಅವರನ್ನ ಮತ್ತೆ ಲೈಮ್​ ಲೈಟ್​​ಗೆ ತಂದಂತಹ ಚಿತ್ರ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net