ಬ್ಲಾಕ್​​​ ಸೀರೆಯಲ್ಲಿ ಕಂಗೊಳಿಸಿದ ಮಿಲ್ಕಿ ಬ್ಯೂಟಿ; ತಮನ್ನಾ ಕಿಲ್ಲರ್​​ ಫೋಟೋಶೂಟ್​​ಗೆ ಫ್ಯಾನ್ಸ್​​ ಫಿದಾ..!

tfinal
Published on

ತಮ್ಮನ್ನಾ ಭಾಟಿಯಾ ಕಾವಾಲಯ್ಯ ಸಾಂಗ್​ಗೆ ಇತ್ತೀಚೆಗೆ ಹೆಜ್ಜೆ ಹಾಕಿದ್ದು ಅದು ದೊಡ್ಡ ಮಟ್ಟಿನ ಯಶಸ್ಸು ಕಂಡಿತ್ತು. ಹಲವಾರು ವರ್ಷಗಳಿಂದ ತಮನ್ನಾ ಭಾಟಿಯಾ ಟಾಲಿವುಡ್‌ನಲ್ಲಿ ನಾಯಕಿಯಾಗಿ ಮಿಂಚುತ್ತಿದ್ದಾರೆ. ತಮನ್ನಾ ಫ್ಯಾನ್ಸ್​​​ ಅವರ ಸೋಶಿಯಲ್​ ಮೀಡಿಯಾದಲ್ಲಿ ಯಾವಾಗ ಹೊಸ ಪೋಟೊಗಳನ್ನ ಅಪ್ಲೋಡ್​​ ಮಾಡುತ್ತಾರೆ ಎಂದು ಕಾಯುತ್ತಲೇ ಇರ್ತಾರೆ.


ಅಂತೆಯೇ ತಮನ್ನಾ ಇತ್ತೀಚೆಗಷ್ಟ ಕಪ್ಪು ಸೀರೆಯಲ್ಲಿನ ಫೋಟೋಶೂಟ್​​ ಬಂದನ್ನ ತಮ್ಮ ಇನ್ಸ್​ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಸದ್ಯ ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​​ ವೈರಲ್​ ಆಗಿದೆ. ಸದ್ಯ ಈ ಫೋಟೋಗಳಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕಾಮೆಂಟ್​​ ಮಾಡುತ್ತಿದ್ದಾರೆ.


ಕಪ್ಪು ಸೀರೆಯಲ್ಲಿ ತಮನ್ನಾ ಮಿಲ್ಕಿ ಬ್ಯೂಟಿ ಅಂತೆಯೇ ಕಾಣುತ್ತಿದ್ದು, ಸದ್ಯ ಸೋಷಿಯಲ್‌ ಮಿಡಿಯಾದಲ್ಲಿ ತಮನ್ನಾ ಶೇರ್‌ ಮಾಡಿಕೊಂಡ ಪೋಟೋಗಳಿಗೆ ನೆಟ್ಟಿಗರಿಂದ ಕಾಮೆಂಟ್‌ಗಳ ಸುರಿಮಳೆಯಾಗುತ್ತಿದೆ.


ತಮನ್ನಾ ಸದ್ಯ ಬಾಂದ್ರಾ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದು, ಇತ್ತೀಚೆಗಷ್ಟೇ ಆ ಚಿತ್ರದ ಟೀಸರ್ ಬಿಡುಗಡೆಯಾಗಿ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ.


ಜೀ ಕರ್ದಾ ಲಸ್ಟ್ ಸ್ಟೋರೀಸ್ ಎಂಬ 2 ಚಿತ್ರಗಳ ಮೂಲಕ ತಾವು ಹಾಕಿಕೊಂಡಿದ್ದ ನಿಯಮಗಳನ್ನು ಮುರಿದಿದ್ದು ಅದರಲ್ಲಿ ಬಾಲಿವುಡ್​​ ನಟ ವಿಜಯ್​ ವರ್ಮಾಗೆ ಕಿಸ್​​ ಮಾಡಿದ್ದಾರೆ.


ಇನ್ನು ಇವರಿಬ್ಬರೂ ಅನೇಕ ಔತಣ ಕೂಟ ಅಥವಾ ಯಾವುದೇ ಫಂಕ್ಷನ್​ ಇರಲಿ ಒಟ್ಟಿಗೇ ಕಾಣಿಸಿಕೊಳ್ಳುತ್ತಿರುತ್ತಾರೆ.
ಸದ್ಯ ತಮನ್ನಾ ಹಂಚಿಕೊಂಡ ಫೋಟೋಗೆ ಜನರು ಭಾರೀ ಸಂಖ್ಯೆಯಲ್ಲಿ ಕಾಮೆಂಟ್​​ ಮಾಡಿದ್ದು, ಭಾಟಿಯಾ ರೀತಿ ಮಿಲ್ಕಿ ಬ್ಯೂಟಿ ಯಾರೂ ಇಲ್ಲ ಎಂದೂ ಹೇಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net