ರಾಜಕೀಯ ಅಖಾಡಕ್ಕೆ ಅಜಿತ್​ ಎಂಟ್ರಿ? ಶಾಕಿಂಗ್ ಉತ್ತರ ಕೊಟ್ಟ ತಮಿಳು ಅಭಿಮಾನಿಗಳ 'ತಲಾ'​ | Actor Ajith ​

ವಿಜಯವಾಣಿ - 2025-05-03T135523.559
Published on

Actor Ajith: ಇತ್ತೀಚೆಗಷ್ಟೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮಭೂಷಣ ಪ್ರಶಸ್ತಿ ಪಡೆದ ಸ್ವೀಕರಿಸಿದ ತಮಿಳು ದಿಗ್ಗಜ ನಟ ಅಜಿತ್ ಕುಮಾರ್​, ಇದೀಗ ತಮ್ಮ ಸಿನಿ ವೃತ್ತಿಗೆ ಗುಡ್​ಬೈ ಹೇಳುವ ಮನಸ್ಸು ಮಾಡಿದ್ದಾರೆ ಎಂದು ಸಿನಿ ವರದಿಗಳು ಸೂಚಿಸಿವೆ. ಈ ಮಧ್ಯೆ ಚಿತ್ರರಂಗ ತೊರೆಯಲು ಅವರ ರಾಜಕೀಯ ಎಂಟ್ರಿಯೇ ಕಾರಣ ಎಂಬ ಸುದ್ದಿಗಳು ಸದ್ಯ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಈ ಪ್ರಶ್ನೆಗಳಿಗೆ ಸ್ವತಃ ಅಜಿತ್ ಅವರೇ ಉತ್ತರಿಸಿದ್ದಾರೆ.

"ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ರಾಜಕೀಯಕ್ಕೆ ಪ್ರವೇಶಿಸಬಹುದು ಮತ್ತು ಈ ವಿಷಯದಲ್ಲಿ ನಟರಿಗೆ ಯಾವುದೇ ನಿರ್ಬಂಧಗಳಿಲ್ಲ. ರಾಜಕೀಯ ಪ್ರವೇಶಿಸುವ ಭರವಸೆ ಅಥವಾ ಯೋಚನೆ ನನಗಿಲ್ಲ ಎಂದರು. ಇದೇ ಸಮಯದಲ್ಲಿ ತಮ್ಮ ಸ್ನೇಹಿತ ದಳಪತಿ ವಿಜಯ್​ರನ್ನು ನೆನೆಪಿಸಿಕೊಂಡ ಅಜಿತ್​, ವಿಜಯ್​ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು ನನಗೆ ಖುಷಿಯಿದೆ. ಇದು ಅವರ ಅತ್ಯಂತ ಧೈರ್ಯಶಾಲಿ ಹೆಜ್ಜೆ" ಎಂದು ಶ್ಲಾಘಿಸಿದರು.

"ರಾಜಕೀಯದಲ್ಲಿ ಬದಲಾವಣೆ ತರಬಹುದು ಎಂಬ ನಂಬಿಕೆಯೊಂದಿಗೆ ರಾಜಕೀಯ ಪ್ರವೇಶಿಸುವ ಎಲ್ಲರಿಗೂ ಯಶಸ್ಸು ಸಿಗಲಿ ಎಂದು ನಾನು ಹಾರೈಸುತ್ತೇನೆ. 140 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಭಾರತದಲ್ಲಿ ವಿವಿಧ ಧರ್ಮ, ಜಾತಿ ಮತ್ತು ಭಾಷೆಯ ಜನರು ಸಾಮರಸ್ಯದಿಂದ ಬದುಕುತ್ತಿದ್ದಾರೆ ಮತ್ತು ರಾಜಕೀಯ ನಾಯಕರು ಮಾತ್ರ ಅವರೆಲ್ಲರನ್ನೂ ಒಗ್ಗಟ್ಟಿನಿಂದ ಮುನ್ನಡೆಸುವ ಶಕ್ತಿ ಹೊಂದಿದ್ದಾರೆ" ಎಂದು ಹೇಳಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net