

ನವದೆಹಲಿ: ಹುಡುಗಿಯನ್ನು ಇಷ್ಟಪಡಲು ಮತ್ತು ಪ್ರೀತಿಸಲು ಕೆಲವು ಕಾರಣಗಳಿವೆ. ಸಾಮಾನ್ಯವಾಗಿ ಅನೇಕರು ಸೌಂದರ್ಯಕ್ಕೆ ಆದ್ಯತೆ ನೀಡುತ್ತಾರೆ. ಸುಂದರ ಹುಡುಗಿಯರನ್ನು ಮದುವೆಯಾಗಲು ಅನೇಕ ಹುಡುಗರು ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಆದರೆ ಇಲ್ಲೊಬ್ಬಳು ಸುಂದರವಾದ ಯುವತಿಗೆ ವಿಚಿತ್ರ ಸಮಸ್ಯೆಯೊಂದು ಕಾಡುತ್ತಿದೆ.
ಫ್ಯಾಷನ್ ಸ್ಟೈಲಿಸ್ಟ್ ಆಗಿರುವ ಆಶ್ಲೇಗೆ ಆಕೆಯ ಸೌಂದರ್ಯವೇ ಸಮಸ್ಯೆಯಾಗಿ ಪರಿಣಮಿಸಿದೆ. ತಾನು ಸುಂದರಿ ಹಾಗೂ ಕ್ರಿಯಾಶೀಲ ಮತ್ತು ಬುದ್ಧಿವಂತ ಹುಡುಗಿ ಎಂಬ ಕಾರಣಕ್ಕೆ ಪುರುಷರು ತನ್ನನ್ನು ರೊಮ್ಯಾನ್ಸ್ ಮಾಡಲು ಹೆದರುತ್ತಾರೆ ಎಂದು ಅವರು ವಿಡಿಯೋದಲ್ಲಿ ಬಹಿರಂಗಪಡಿಸಿದ್ದಾರೆ.ಇದಕ್ಕೆ ನೆಟಿಜನ್‌ಗಳು ತಮಾಷೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಆಶ್ಲೇ ಟೆಕ್ಸಾಸ್‌ನ ಟಿಕ್‌ಟಾಕ್ ಕಲಾವಿದೆ. ಇತ್ತೀಚೆಗೆ ಅವರು ಟಿಕ್‌ಟಾಕ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡು, ಒಂಟಿಯಾಗಿದ್ದೇನೆ. ತನಗೆ ಬಾಯ್ ಫ್ರೆಂಡ್ ಇಲ್ಲ ಎಂದು ಯಾರೂ ನಂಬಲಿಲ್ಲ. ಹುಡುಗರು ತನ್ನನ್ನು ರೊಮ್ಯಾನ್ಸ್ ಮಾಡಲು ಹೆದರುತ್ತಾರೆ ಎಂದು ಅವಳು ಹೇಳಿಕೊಂಡಿದ್ದಾಳೆ.
'ಹುಡುಗರು ಸಾಮಾನ್ಯವಾಗಿ ಸ್ಮಾರ್ಟ್, ಸುಂದರ ಹುಡುಗಿಯರನ್ನು ಇಷ್ಟಪಡುತ್ತಾರೆ. ಆದರೆ, ತಮಗಿಂತ ಬುದ್ದಿವಂತ ಹುಡುಗಿಯರ ಜೊತೆ ಇರಲು ಹೆದರುತ್ತಾರೆ. ಅಂಥವರ ಜೊತೆ ರೊಮ್ಯಾನ್ಸ್ ಮಾಡುವುದಕ್ಕೂ ಅವರು ಒಂದು ಹೆಜ್ಜೆ ಹಿಂದೆ ಇಡುತ್ತಾರೆ. ನಾನು ನೈಸರ್ಗಿಕ ಸುಂದರಿ. ಇದರೊಂದಿಗೆ ದೇವರು ನನಗೆ ಯಶಸ್ಸನ್ನು ಕೊಟ್ಟಿದ್ದಾನೆ. ನನ್ನಲ್ಲಿ ಈ ಎರಡು ಗುಣಗಳಿವೆ. ಹಾಗಂತ ನಾನೇನು ಸಿಂಪಲ್ ಹುಡುಗಿ ಅಲ್ಲ. ಅದಕ್ಕಾಗಿಯೇ ಹುಡುಗರು ನನ್ನ ಹತ್ತಿರವೂ ಬರುವುದಿಲ್ಲ.ನನ್ನ ನೋಟವು ಪ್ರಣಯದ ಅವಕಾಶಗಳನ್ನು ಸಹ ಹಾಳುಮಾಡುತ್ತಿದೆ' ಎಂದು ಹೇಳಿಕೊಂಡಿದ್ದಾಳೆ.
ಕಳೆದ ಎಂಟು ತಿಂಗಳಿಂದ ತಾನು ಒಬ್ಬ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾನೆ. ಆದರೂ ನಾನೂ ಒಂಟಿಯಾಗಿದ್ದೇನೆ. ಕೆಲವು ಹುಡುಗರು ಇಷ್ಟ ಪಡುತ್ತಾರೆ, ಆದರೆ ಕೆಲವರು ಇಷ್ಟ ಪಡದೆ ದೂರ ಇಟ್ಟಿದ್ದಾರೆ ಎಂದು ವಿಡಿಯೋದಲ್ಲಿ ಹೇಳಿದ್ದಾಳೆ. ಇದರಿಂದಾಗಿ ಆಕೆಯ ಹೇಳಿಕೆಗೆ ಸಾಮಾಜಿಕ ಜಾಲತಾಣ ಬಳಕೆದಾರರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ನಂಬಲು ಸಾಧ್ಯವಿಲ್ಲ... 'ಕೆಲವೊಮ್ಮೆ ಸುಂದರವಾಗಿದು ಶಾಪವಾಗಬಹುದು.' ನಾನು ಒಂಟಿಯಾಗಿದ್ದರೂ ಸಹ ತುಂಬಾ ಖುಷಿಯಾಗಿದ್ದೇನೆ ನೀವೂ ಹಾಗೆ ಇರಿ' ನಾವೇನು ಮಾಡ್ಬೇಕು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.