ಉಸಿರಾಟ ಸಮಸ್ಯೆ ಇರುವವರಿಗೂ ಪರೀಕ್ಷೆ

usirata mar 20
Published on

ನವದೆಹಲಿ: ಭಾರತದಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ವೇಗವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆ ಉಸಿರಾಟದ ಸಮಸ್ಯೆ, ಕೆಮ್ಮು, ಜ್ವರದಿಂದಾಗಿ ಆಸ್ಪತ್ರೆಗೆ ದಾಖಲಾಗುವ ಎಲ್ಲರಿಗೂ ಕರೊನಾ ವೈದ್ಯಕೀಯ ತಪಾಸಣೆ ನಡೆಸಿ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅದೇಶಿಸಿದೆ.

ಸೋಂಕಿತರೊಂದಿಗೆ ಸಂಪರ್ಕಕ್ಕೆ ಬಂದು ಕರೊನಾದ ಯಾವ ಲಕ್ಷಣ ಹೊಂದಿಲ್ಲದಿದ್ದವರನ್ನೂ ಪರೀಕ್ಷೆಗೆ ಒಳಪಡಿಸಿ ಎಂದು ಐಸಿಎಂಆರ್ ತಿಳಿಸಿದೆ. ಸೋಂಕಿತರ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು 5ನೇ ದಿನ ಮತ್ತು 14ನೇ ದಿನ ಪರೀಕ್ಷೆಗೆ ಒಳಡಿಸಬೇಕು. ಸೋಂಕಿತರ ಜತೆ ಒಂದೇ ಮನೆಯಲ್ಲಿ ವಾಸಿಸಿದ್ದವರು ಸೋಂಕಿಗೆ ಒಳಗಾಗುವ ಸಂಭವ ಹೆಚ್ಚು. ಯಾವುದೇ ಶಂಕಿತರು ಆಸ್ಪತ್ರೆಯಿಂದ ಹೊರ ಹೋಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದೆ.

ಮಾರಕ ಕರೊನಾ ವೈರಸ್ ಭಾರತದಲ್ಲಿ ದಿನೇದಿನೆ ತನ್ನ ದಾಳಿ ಹೆಚ್ಚಿಸುತ್ತಿದೆ. ಮತ್ತೆ 98 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 298ಕ್ಕೆ ಏರಿಕೆಯಾಗಿದೆ. ದೆಹಲಿ, ಕರ್ನಾಟಕ, ಪಂಜಾಬ್ ಮತ್ತು ಮಹಾರಾಷ್ಟ್ರದಲ್ಲಿ ಮತ್ತೆ ತಲಾ 4 ಹಾಗೂ ಲಡಾಖ್​ನಲ್ಲಿ ಮೂವರಿಗೆ ಸೋಂಕು ಇರುವುದು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ದೇಶದಲ್ಲಿ ಅತಿ ಹೆಚ್ಚು ಪ್ರಕರಣಗಳು ಮಹಾರಾಷ್ಟ್ರದಲ್ಲಿದ್ದು, ಮೂವರು ವಿದೇಶಿ ಪ್ರಜೆಗಳು ಸೇರಿ ಒಟ್ಟು 63 ಜನರು ಸೋಂಕಿನಿಂದ ಬಳಲುತ್ತಿದ್ದಾರೆ.

ಕೇರಳದಲ್ಲಿ 7 ವಿದೇಶಿಗರು ಸೇರಿ 40 ಪ್ರಕರಣಗಳು ದಾಖಲಾಗಿವೆ. ರಾಷ್ಟ್ರ ರಾಜಧಾನಿಯಲ್ಲಿ ಈವೆರೆಗೆ 26 ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿದ್ದು, ಉತ್ತರಪ್ರದೇಶದಲ್ಲಿ ಪ್ರಕರಣಗಳ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ 39 ಜನರು ವಿದೇಶಿ ಪ್ರಜೆಗಳಿದ್ದು, ಇಟಲಿಯ 17, ಫಿಲಿಪ್ಪೀನ್ಸ್​ನ 3, ಬ್ರಿಟನ್​ನ ಇಬ್ಬರು ಹಾಗೂ ಕೆನಡಾ, ಇಂಡೋನೇಷ್ಯಾ ಹಾಗೂ ಸಿಂಗಾಪುರದ ತಲಾ ಒಬ್ಬರು ಇದ್ದಾರೆ. ರೋಮ್ಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗಾಗಿ ಏರ್ ಇಂಡಿಯಾ 787 ಡ್ರೀಮ್ೈನರ್ ವಿಮಾನವನ್ನು ರವಾನಿಸಿದೆ.ಆಮ್ಸ್​ಸ್ಟರ್​ಡ್ಯಾಮ್ಂದ ದೆಹಲಿಗೆ ಬರುತ್ತಿದ್ದ ವಿಮಾನವನ್ನು ಕರೊನಾ ಭೀತಿಯಿಂದಾಗಿ ಮಾರ್ಗ ಮಧ್ಯದಿಂದಲೇ ವಾಪಸ್ ಕಳುಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net