ಪಹಲ್ಗಾಮ್​ನ ಈ ಮೂರು ಸ್ಥಳಗಳ ಮೇಲೆ ಕಣ್ಣಿಟ್ಟಿದ್ದ ಭಯೋತ್ಪಾದಕರು; Terror attack

Pahalgam Terror Attack
Published on

ಹತ್ಯಾಕಾಂಡದಲ್ಲಿ ಭಾಗಿಯಾಗಿರುವ ಪಾಕಿಸ್ತಾನಿ ಭಯೋತ್ಪಾದಕರ ಗುಂಪು, ದಾಳಿಗೆ ಕನಿಷ್ಠ ಎರಡು ದಿನಗಳ ಹಿಂದೆಯೇ ಬೈಸರನ್ ಕಣಿವೆಯಲ್ಲಿತ್ತು ಎಂದು NIA ಮೂಲಗಳು ತಿಳಿಸಿವೆ.

Terror attack| ಏಪ್ರಿಲ್ 22 ರಂದು 26 ಜನರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಒಂದು ವಾರದ ಮುಂಚೆ, ಭಯೋತ್ಪಾದಕರು ಈ ಪ್ರದೇಶದ ಮೂರು ಸ್ಥಳಗಳಲ್ಲಿ ಕಣ್ಗಾವಲು ನಡೆಸಿದ್ದರು ಎಂದು ಹೇಳಲಾಗಿದೆ.

ಮೂಲಗಳ ಪ್ರಕಾರ, ಬೈಸರನ್ ಹುಲ್ಲುಗಾವಲುಗಳ ಜೊತೆಗೆ, ಭಯೋತ್ಪಾದಕರು ಇತರ ಮೂರು ಜನಪ್ರಿಯ ಪ್ರವಾಸಿ ತಾಣಗಳಾದ ಅರು ಕಣಿವೆ, ಮನೋರಂಜನಾ ಉದ್ಯಾನವನ ಮತ್ತು ಬೇತಾಬ್ ಕಣಿವೆಗಳನ್ನು ಸಮೀಕ್ಷೆ ಮಾಡಿದ್ದು, ಹೆಚ್ಚಿನ ಭದ್ರತೆಯಿಂದಾಗಿ ದಾಳಿ ಮಾಡುವ ಯೋಜನೆಯನ್ನು ಕೈಬಿಡಲಾಗಿದೆ ಎನ್ನಲಾಗಿದೆ.

ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ದಾಳಿಯ ಸಮಯದಲ್ಲಿ ಭಯೋತ್ಪಾದಕರು ಅಲ್ಟ್ರಾ-ಸ್ಟೇಟ್ ಸಂವಹನ ವ್ಯವಸ್ಥೆಯನ್ನು ಬಳಸಿದ್ದಾಗಿ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ. ಈ ವ್ಯವಸ್ಥೆಯು ಭಯೋತ್ಪಾದಕರಿಗೆ ಸಿಮ್ ಕಾರ್ಡ್ ಬಳಸದೆ ಸಂವಹನ ನಡೆಸಲು ಮತ್ತು ಸಂದೇಶಗಳನ್ನು ರವಾನಿಸಲು ಅನುವು ಮಾಡಿಕೊಡುತ್ತವೆ.

Pahalgam Terrorists Attack

ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯು ಇಸ್ರೇಲ್‌ನಲ್ಲಿ ಬಳಸಿದ ಹಮಾಸ್ ತಂತ್ರಗಳಿಗೆ ಗಮನಾರ್ಹ ಹೋಲಿಕೆಗಳನ್ನು ತೋರಿಸಿದೆ. ಪಾಕಿಸ್ತಾನ ಮೂಲದ ಭಯೋತ್ಪಾದಕರು ಹೆಲ್ಮೆಟ್-ಮೌಂಟೆಡ್ ಬಾಡಿ ಕ್ಯಾಮ್‌ಗಳು ಮತ್ತು ಎನ್‌ಕ್ರಿಪ್ಟ್ ಮಾಡಿದ ಅಪ್ಲಿಕೇಶನ್‌ಗಳನ್ನು ಬಳಸಿದ್ದಾರೆ ಎಂದು ತನಿಖಾಧಿಕಾರಿಗಳು ವರದಿ ಮಾಡಿದ್ದಾರೆ.

(ಏಜೆನ್ಸೀಸ್)

ಪಾಕಿಸ್ತಾನ ಸೇನೆಯಿಂದ ನೀಡಲಾದ ಬಂದೂಕುಗಳು, ಸಂವಹನ ಸಾಧನಗಳು ಮತ್ತು ಯುದ್ಧತಂತ್ರದ ಉಪಕರಣಗಳಂತಹ ಶಸ್ತ್ರಾಸ್ತ್ರಗಳನ್ನು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕರು ಹೊಂದಿರುವುದು ಸ್ಪಷ್ಟವಾಗಿವೆ.

ತನಿಖೆ ತೀವ್ರಗೊಳ್ಳುತ್ತಿದ್ದಂತೆ, ಭಯೋತ್ಪಾದಕರಿಗೆ ಬೆಂಬಲ ನೀಡುವಲ್ಲಿ ಸುಮಾರು 20 OGW ಗಳನ್ನು ಗುರುತಿಸಲಾಗಿದ್ದು, ಹಲವರನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ. ಗಮನಾರ್ಹವಾಗಿ, NIA ಮೂಲಗಳ ಪ್ರಕಾರ, ನಾಲ್ಕು OGW ಗಳು ದಾಳಿ ಸ್ಥಳಗಳ ಪತ್ತೆಯಲ್ಲಿ ಪಾಕಿಸ್ತಾನಿ ಭಯೋತ್ಪಾದಕರಿಗೆ ಸಕ್ರಿಯವಾಗಿ ಸಹಾಯ ಮಾಡಿದ್ದಾರೆ ಎಂದು ನಂಬಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net