ಕಾಶ್ಮೀರದಲ್ಲಿ ಉಗ್ರರ ದಾಳಿಯಲ್ಲಿ ಮೂವರು ಯೋಧರು ಹುತಾತ್ಮ

handwara
Published on

ನವದೆಹಲಿ: ಕೆಲದಿನಗಳ ಹಿಂದಷ್ಟೇ ಹಂದ್ವಾರಾದಲ್ಲಿ ಉಗ್ರರು ಒತ್ತೆಸೆರೆ ಇರಿಸಿಕೊಂಡಿದ್ದ ನಾಗರಿಕರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ಭಾರತದ ಐವರು ಯೋಧರು ಹುತಾತ್ಮರಾದ ಘಟನೆ ಮರೆಯುವ ಮುನ್ನವೇ ಉಗ್ರರು ಅದೇ ಹಂದ್ವಾರಾ ಮತ್ತು ಬದ್ಗಾಂನಲ್ಲಿ ಸಿಆರ್​ಪಿಎಫ್​ ಮತ್ತು ಸಿಐಎಸ್​ಎಫ್​ ಯೋಧರ ಮೇಲೆ ಪ್ರತ್ಯೇಕ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದಾರೆ.

ಬದ್ಗಾಂನಲ್ಲಿ ವಿದ್ಯುತ್​ ಸರಬರಾಜು ಕೇಂದ್ರದ ಕಾವಲು ಕಾಯುತ್ತಿದ್ದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗಳ (ಸಿಐಎಸ್​ಎಫ್​) ಯೋಧರ ಮೇಲೆ ಉಗ್ರರು ದಾಳಿ ನಡೆಸಿದರು. ಈ ಘಟನೆಯಲ್ಲಿ ಒಬ್ಬ ಯೋಧ ಗಾಯಗೊಂಡಿದ್ದಾರೆ.

ಇದರ ಜತೆಗೆ ಹಂದ್ವಾರಾದಲ್ಲಿ ಮತ್ತೊಂದು ಉಗ್ರರ ಗುಂಪು ಸಿಆರ್​ಪಿಎಫ್​ ಯೋಧರ ಮೇಲೆ ದಾಳಿ ನಡೆಸಿತು. ಈ ಘಟನೆಯಲ್ಲಿ ಒಬ್ಬ ಉಗ್ರ ಹತನಾದರೆ, ಮೂವರು ಯೋಧರು ಹುತಾತ್ಮರಾಗಿದ್ದಾರೆ ಎನ್ನಲಾಗಿದೆ.

ಸಂಪೂರ್ಣ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net