ಟೆರರಿಸ್ಟ್ ರಾಣಾ ಅರೆಸ್ಟ್​ ; ಹೇಗಿದ್ದಾನೆ ನೋಡಿ ಈ ಉಗ್ರಗಾಮಿ ​: ಇಲ್ಲಿದೆ ಇತನ Exclusive ಫೋಟೋ | Tahawwur Rana

dk - 2025-04-10T212131.718
Published on

Tahawwur Rana : ವಾಣಿಜ್ಯನಗರಿ ಮುಂಬೈ ಮೇಲೆ 2008ರ ನವೆಂಬರ್ 26ರಂದು ನಡೆದ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರ ಪಾಕಿಸ್ತಾನಿ ಮೂಲದ ಕೆನಡಾದ ಉದ್ಯಮಿ ತಹವ್ವೂರ್ ರಾಣಾನನ್ನು ಅಮೆರಿಕ ಗಡಿಪಾರು ಮಾಡಿದ್ದು, ಇದೀಗ ಭಾರತಕ್ಕೆ ಹಸ್ತಾಂತರಿಸಲಾಗಿದೆ.

ಗುರುವಾರ ಸಂಜೆ ಉಗ್ರ ರಾಣಾನನ್ನು ಸೂಕ್ತ ಬಿಗಿ ಭದ್ರತೆಯೊಂದಿಗೆ ದೆಹಲಿಗೆ ಕರೆತರಲಾಗಿದೆ. ರಾಣಾನನ್ನು ಈಗ NIA ಅಧಿಕಾರಿಗಳು ಬಂಧಿಸಿದ್ದು, ಇತ ಬಂಧನಕ್ಕೆ ಸಂಬಂಧಪಟ್ಟಂತೆ Exclusive ಫೋಟೋವೊಂದು ಬಿಡುಗಡೆಯಾಗಿದೆ.

NIA ಅಧಿಕೃತ ಎಕ್ಸ್​ ಖಾತೆ ಈ ಫೋಟೋ ಬಿಡುಗಡೆ ಮಾಡಿದೆ. ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಇಂದೇ ಹಾಜರುಪಡಿಸಲಾಗಿದೆ. ಇನ್ನೂನ್ಯಾಯಾಲಯದ ಸುತ್ತ ಹೆಚ್ಚಿನ ಬಿಗಿ ಭದ್ರತಾ ಕ್ರಮ ಕೈಗೊಳ್ಳಲಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net