ಶಂಕಿತ ಉಗ್ರನಿಗೆ ಆಶ್ರಯ: ಮದರಸ ಮತ್ತು ಮಸೀದಿಗಳಿಗೆ ಪೊಲೀಸರ ನೋಟಿಸ್

CHN
Published on

ಚಾಮರಾಜನಗರ: ಮದರಸದಲ್ಲಿ ಶಂಕಿತ ಉಗ್ರನಿಗೆ ಆಶ್ರಯ ನೀಡಿದ ಆರೋಪದ ಹಿನ್ನೆಲೆಯಲ್ಲಿ ಮದರಸ ಮತ್ತು ಮಸೀದಿಗಳಿಗೆ ಜಿಲ್ಲಾ ಪೊಲೀಸರು ನೋಟಿಸ್ ನೀಡಿದ್ದಾರೆ.

ನೋಟಿಸ್​ನಲ್ಲಿ ಮಸೀದಿ ಮತ್ತು ಮದರಸಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವಂತೆ ಸೂಚಿಸಲಾಗಿದೆ. ಒಂದು ವಾರದೊಳಗೆ ಸಿಸಿ ಕ್ಯಾಮರಾ ಅಳವಡಿಸಲು ತಾಕೀತು ಮಾಡಲಾಗಿದೆ.

ಶನಿವಾರ ಮುಂಜಾನೆ ಮೌಲ್ವಿ ಸೇರಿದಂತೆ ಇಬ್ಬರು ಶಂಕಿತ ಉಗ್ರರನ್ನು ಇಲ್ಲಿನ ಪೊಲೀಸರು ಬಂಧಿಸಿದ್ದರು. ಶಂಕಿತ ಉಗ್ರನಿಗೆ ಮೌಲ್ವಿ 10 ದಿನಗಳ ಕಾಲ ಆಶ್ರಯ ನೀಡಲಾಗಿದೆ ಎಂದು ಆರೋಪಿಸಿ ಬಂಧನ ಮಾಡಲಾಗಿತ್ತು.

ಗುಂಡ್ಲುಪೇಟೆಯ ಮೌಲ್ವಿ ಸದಾವುತ್ ಉಲ್ಲಾ ಖಾನ್ ಬಂಧಿಸಿ, ಬಿಡುಗಡೆಗೊಳಿಸಲಾಗಿತ್ತು. ಶಂಕಿತ ಉಗ್ರ ಆಯುಬ್ ಖಾನ್ ಬಂಧಿಸಿ ವಿಚಾರಣೆ ಪೊಲೀಸರು ನಡೆಸುತ್ತಿದ್ದಾರೆ.

ಸಿಸಿಬಿ, ಆಂತರಿಕ ಭದ್ರತಾ ಪಡೆ, ಉಗ್ರಗಾಮಿ ನಿಗ್ರಹ ಪಡೆ ಮತ್ತು ಪೊಲೀಸರು ಜಂಟಿಯಾಗಿ ಶಂಕಿತ ಉಗ್ರನನ್ನು ಬಂಧಿಸಿದ್ದರು. ಮಸೀದಿ ಮತ್ತು ಮದರಸಗಳಿಗೆ ಅಪರಿಚಿ ವ್ಯಕ್ತಿಗಳು ಬಂದರೆ ತಕ್ಷಣ ಮಾಹಿತಿ ನೀಡುವಂತೆ ಸಮುದಾಯದ ಮುಖಂಡರಿಗೆ ಪೊಲೀಸರ ತಾಕೀತು.

ಮುಸ್ಲಿಂ ಮುಖಂಡರನ್ನು ಪೊಲೀಸ್ ಠಾಣೆಗೆ ಕರೆಸಿ ಖಡಕ್ ಎಚ್ಚರಿಕೆ ನೀಡಿದ ಗುಂಡ್ಲುಪೇಟೆ ಪೊಲೀಸರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net