ವಿಯೆನ್ನಾದ ಹಲವೆಡೆ ಭಯೋತ್ಪಾದಕರ ದಾಳಿ

Vieanna
Published on

ವಿಯೆನ್ನಾ: ಆಸ್ಟ್ರಿಯಾದ ರಾಜಧಾನಿ ವಿಯೆನ್ನಾದ ಹಲವೆಡೆ ಸೋಮವಾರ ಸಂಜೆ ಶಸ್ತ್ರಧಾರಿ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಓರ್ವ ಉಗ್ರ ಸೇರಿ ಐವರು ಮೃತರಾಗಿದ್ದು, 15ಕ್ಕೂ ಹೆಚ್ಚು ಮಂದಿ ಗಾಯವಾಗಿದೆ. ಇದೊಂದು ಭಯಾನಕ ಉಗ್ರ ಕೃತ್ಯ ಎಂದು ಆಸ್ಟ್ರಿಯಾ ಚಾನ್ಸಲರ್ ಸಬಾಸ್ಟಿಯನ್ ಕುಝರ್å್ ಆಘಾತ ವ್ಯಕ್ತಪಡಿಸಿದ್ದಾರೆ.

ಪ್ರಸಿದ್ಧ ಒಪೆರಾ ಹೌಸ್ ಸೇರಿ ಒಟ್ಟು ಆರು ಸ್ಥಳಗಳಲ್ಲಿ ಸೋಮವಾರ ರಾತ್ರಿ 8ರ ವೇಳೆಗೆ ದುಷ್ಕರ್ವಿುಗಳು ಭಾರಿ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ರಕ್ಷಣಾ ಪಡೆ ನಡೆಸಿದ ಪ್ರತಿದಾಳಿಗೆ ಓರ್ವ ಉಗ್ರ ಮೃತನಾಗಿದ್ದು, ಇನ್ನೊಬ್ಬ ಓಡಿಹೋಗಿದ್ದಾನೆ ಎಂದು ಗೃಹ ಸಚಿವ ಕಾರ್ಲ್ ನೆಹ್ಮರ್ ತಿಳಿಸಿದ್ದಾರೆ. ಇವರಿಬ್ಬರು ಐಸಿಸ್​ಗೆ ಸೇರಿರುವವನು ಎನ್ನಲಾಗಿದೆ.

ಪ್ರಧಾನಿ ಖಂಡನೆ: ವಿಧ್ವಂಸಕ ಕೃತ್ಯ ಖಂಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ಸಮಯದಲ್ಲಿ ಆಸ್ಟ್ರಿಯಾದೊಂದಿಗೆ ನಿಲ್ಲುವುದಾಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net