

Shaurya Ratna Award : ಷಣ್ಮುಕಾನಾಂದ ಸಭೆಯು ಇದೇ 2025 ರ ಆಗಸ್ಟ್ 15 ರಂದು ಸಮಾರಂಭವನ್ನು ಆಯೋಜಿಸಲಿದ್ದು, 2008ರಲ್ಲಿ ಮುಂಬೈನ ಭಯೋತ್ಪಾದಕ ದಾಳಿಯಿಂದ ಬದುಕುಳಿದ ದೇವಿಕಾ ರೋಟವಂ ಅವರಿಗೆ ಶ್ರೀ ಷಣ್ಮುಕ ಶೌರ್ಯ ಪ್ರಶಸ್ತಿ ಕೊಟ್ಟು ಸನ್ಮಾನಿಸಲಿದೆ.
9 ವರ್ಷ ಇದ್ದಾಗ ಈ ಬಾಲಕಿಯ ಕಾಲಿಗೆ ಗುಂಡು ತಗುಲಿದ್ದು, ನಂತರ ವಿಚಾರಣೆ ಸಮಯದಲ್ಲಿ ಈಕೆ ಪಾಕಿಸ್ತಾನದ ಭಯೋತ್ಪಾದಕ ಅಜ್ಮಲ್ ಕಸಬ್ನನ್ನು ಆ ವಯಸ್ಸಿನಲ್ಲಿಯೇ ಗುರುತಿಸಿದ್ದಳು. ಈ ವೇಳೆ ಭಯೋತ್ಪಾದಕನಿಗೆ ಸರ್ಕಾರ ಶಿಕ್ಷೆಯನ್ನು ವಿಧಿಸಿತ್ತು. ಇನ್ನು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸೇನಾ ಸಿಬ್ಬಂದಿ ಕುಟುಂಬಗಳಿಗೂ ಹಾಗೂ ಆಪ್ ಸಿಂಧೂರ್ ಸಮಯದಲ್ಲಿ ಮಡಿದ ನಾಗರಿಕರ ಕುಟುಂಬಗಳಿಗೂ ಸಹ ಈ ಸಮಾರಂಭದಲ್ಲಿ ಸನ್ಮಾನಿಸಲಾಗುವುದು.
ಈ ಕಾರ್ಯಕ್ರಮದಲ್ಲಿ ಕ್ಯಾಂಟೀನ್ ಸ್ಟೋರ್ಸ್ನ ಮುಖ್ಯಸ್ಥ ಮೇಜರ್ ಜನರಲ್ ಸತೀಂದರ್ ಸಿಂಗ್ ಅಧ್ಯಕ್ಷತೆ ವಹಿಸಲಿದ್ದು, ಸ್ಟೇಷನ್ ಕಮಾಂಡರ್ ಬ್ರಿಗ್ ಜ್ಞಾನ್ ತ್ರಿವೇದಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. (ಏಜೆನ್ಸೀಸ್)