

ಉದಯಪುರ: ಬಹುಚರ್ಚಿತ ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ನಿಯಮ ಜಾರಿಗೊಳಿಸುವ ಕುರಿತ ಪ್ರಸ್ತಾಪಕ್ಕೆ ಕಾರ್ಯಕಾರಿ ಸಮಿತಿ ಅನುಮೋದನೆ ನೀಡುವುದರೊಂದಿಗೆ ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿದ್ದ ಮೂರು ದಿನಗಳ ಕಾಂಗ್ರೆಸ್ ಚಿಂತನ ಶಿಬಿರ ಭಾನುವಾರ ಸಮಾಪನಗೊಂಡಿತು.
ಇನ್ನು ಪದಲ್ಲಿ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲು ಸಂಸದೀಯ ಮಂಡಳಿ ರಚಿಸಬೇಕೆಂಬ ಬಂಡಾಯ ನಾಯಕರ ಬೇಡಿಕೆಯನ್ನು ಸಮಿತಿ ತಿರಸ್ಕರಿಸಿದ್ದು, ಪ್ರತಿ ರಾಜ್ಯದಲ್ಲೂ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ ವ್ಯವಹಾರ ಸಮಿತಿ ರಚನೆ ಮಾಡಲು ತೀರ್ಮಾನ ಮಾಡಲಾಗಿದೆ.
ಕಾಂಗ್ರೆಸ್ನಲ್ಲಿ ಆಮೂಲಾಗ್ರ ಬದಲಾವಣೆ ಬಯಸಿದ್ದ ಬಂಡಾಯ ನಾಯಕರು, ಸಂಸದೀಯ ಮಂಡಳಿಯು ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಬಯಸಿದ್ದರು. ಆದರೆ ಇದು ಪದ ರಾಷ್ಟ್ರೀಯ ಮುಖ್ಯಸ್ಥರ ಅಧಿಕಾರಕ್ಕೆ ಕಡಿವಾಣ ಹಾಕಬಹುದು ಎಂದು ಕಾರ್ಯಕಾರಿ ಸಮಿತಿ ಭಾವಿಸಿತು. ಸದ್ಯ ಪದ ಚುನಾವಣಾ ಸಮಿತಿಯು ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದೆ.
ಚಿಂತನ ಶಿಬಿರದ ಕೊನೆಯ ದಿನ ಸಭೆ ಉದ್ದೇಶಿಸಿ ಮಾತನಾಡಿದ ಪದ ನಾಯಕಿ ಸೋನಿಯಾ ಗಾಂಧಿ, ಶಿಬಿರದ ವಿವಿಧ ಸಮಿತಿಗಳ ಸಭೆಯಲ್ಲಿ ಚರ್ಚಿಸಲಾದ ಆಂತರಿಕ ಸುಧಾರಣೆಗಳ ಪ್ರಕ್ರಿಯೆಗೆ ಚಾಲನೆ ನೀಡಲು ಸಶಕ್ತ ಕಾರ್ಯಪಡೆ ರಚನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಶಿಬಿರದಲ್ಲಿದ್ದ ವಿವಿಧ ಸಮಿತಿಗಳು 2024ರ ಲೋಕಸಭಾ ಚುನಾವಣೆಯ ಮೇಲೆ ಕೇಂದ್ರೀಕರಿಸಲಿದ್ದು. ಸಂಟನೆ, ಪದ ಪ್ರಭಾವ ಮತ್ತು ರಾಜ್ಯಗಳಲ್ಲಿ ಮೈತ್ರಿಕೂಟ ರಚನೆಯಂತಹ ಮಹತ್ವದ ವಿಚಾರಗಳ ಸೂಕ್ತ ನಿರ್ಧಾರ ಕೈಗೊಳ್ಳಲು ಸಲಹೆ, ಮಾರ್ಗದರ್ಶನ ನೀಡಲಿದೆ.
ಪಾದಯಾತ್ರೆ: ಪದ ವತಿಯಿಂದ ಭಾರತ ಜೋಡೋ ಯಾತ್ರೆ ಆಯೋಜಿಸಲು ತೀರ್ಮಾನಿಸಲಾಗಿದ್ದು, ಈ ಯಾತ್ರೆ ಪ್ರತಿ ಜಿಲ್ಲೆಯಲ್ಲಿ 75 ಕಿ.ಮೀ ದೂರ ಕ್ರಮಿಸಲಿದೆ. ಮಹಾತ್ಮಾ ಗಾಂಧೀಜಿಯವರ ಜನ್ಮದಿನ ಅ.2ರಂದು ಈ ಪಾದಯಾತ್ರೆ ಆರಂಭವಾಗಲಿದೆ.
ಕುಟುಂಬಕ್ಕೊಂದೇ ಟಿಕೆಟ್ ಅಂತಿಮ
ಇಡೀ ಶಿಬಿರದಲ್ಲಿ ಹೆಚ್ಚು ಚರ್ಚೆಯಾದ ಒಬ್ಬ ವ್ಯಕ್ತಿ ಒಂದು ಹುದ್ದೆ ಮತ್ತು ಒಂದು ಕುಟುಂಬ ಒಂದು ಟಿಕೆಟ್ ನಿಯಮ ಅಂತಿಮಗೊಂಡಿದೆ. ಪದಲ್ಲಿ ಐದು ಅಥವಾ ಐದಕ್ಕಿಂತಲೂ ಹೆಚ್ಚು ವರ್ಷ ಸಕ್ರಿಯವಾಗಿ ಸೇವೆ ಸಲ್ಲಿಸಿದ ಕುಟುಂಬದ ಮತ್ತೋರ್ವ ವ್ಯಕ್ತಿ ಚುನಾವಣೆಗೆ ಟಿಕೆಟ್ ಕೇಳಲು ಅರ್ಹರಾಗಿರುತ್ತಾರೆ ಎನ್ನುವುದೂ ಗಮನಾರ್ಹ. ಇದರಿಂದಾಗಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಚುನಾವಣೆಗೆ ಸ್ಪರ್ಧಿಸಲು ಅರ್ಹರಾಗಿದ್ದಾರೆ.
ಸಲಹಾ ಸಮಿತಿ ರಚನೆ
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರುಳ್ಳ ಸಲಹಾ ಸಮಿತಿ ರಚನೆ ಮಾಡಲು ಸೋನಿಯಾ ತೀರ್ಮಾನಿಸಿದ್ದಾರೆ. ಇದು ರಾಜಕೀಯ ವಿಷಯಗಳ ಬಗ್ಗೆ ಚರ್ಚಿಸಲಿದ್ದು, ಆಗಾಗ್ಗೆ ಸಭೆ ಸೇರಲಿದೆ. ಈ ಸಮಿತಿ ಆದರೆ ಇದು ಸಾಮೂಹಿಕ ನಿರ್ಧಾರ ತೆಗೆದುಕೊಳ್ಳುವ ಗುಂಪಾಗಿರುವುದಿಲ್ಲ. ಆದರೆ ಹಿರಿಯ ಸಹೋದ್ಯೋಗಿಗಳ ಅನುಭವದ ಪ್ರಯೋಜನ ಮುಂದಾಗಲಿದೆ ಎಂದು ಸೋನಿಯಾ ವಿವರಿಸಿದ್ದಾರೆ.