

ತರೀಕೆರೆ: ಬಳ್ಳಾವರ ಗ್ರಾಮದ ಕ್ರಿಕೆಟರ್ ಕಿರಣ್‌ಕುಮಾರ್ ಭಾರತೀಯ ಟೆನ್ನಿಸ್ ಬಾಲ್ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಪಟ್ಟಣದ ಎಸ್‌ಜೆಎಂ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿ ಕಿರಣ್‌ಕುಮಾರ್ ಶ್ರೀಲಂಕಾ ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಕೊಲಂಬೊದಲ್ಲಿ ಆಯೋಜಿಸಿರುವ ಶ್ರೀಲಂಕಾ ಮತ್ತು ಭಾರತ ತಂಡಗಳ ನಡುವಿನ ಅಂತಾರಾಷ್ಟ್ರೀಯ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ತಂಡ ಪ್ರತಿನಿಧಿಸಿದ್ದಾರೆ. ಮೊದಲ ಕ್ರಮಾಂಕದ ಬ್ಯಾಟಿಂಗ್ ಹಾಗೂ ಮಧ್ಯಮ ವೇಗದಲ್ಲಿ ಬೌಲಿಂಗ್ ಮಾಡುವ ಕಿರಣ್‌ಕುಮಾರ್ ಬಳ್ಳಾವರದ ಕೃಷಿ ಕಾರ್ಮಿಕರಾದ ವೆಂಕಟೇಶ್ ಮತ್ತು ಶಾಂತಾ ದಂಪತಿ ಪುತ್ರ.