ವೇಮಗಲ್​ ನಾಡಕಚೇರಿಗೆ ತಾತ್ಕಾಲಿಕ ಆಪರೇಟರ್​ ನೇಮಕ

vemgal
ವಿಶೇಷ ವರದಿ
Published on

ಕೋಲಾರ/ವೇಮಗಲ್​: ಕೋಲಾರ ತಾಲೂಕು ವೇಮಗಲ್​ನ ನಾಡಕಚೇರಿಯಲ್ಲಿ ಆಧಾರ್​ ಆಪರೇಟರ್​ ಇಲ್ಲದೆ ಜನರು ಸಂಕಷ್ಟ ಅನುಭವಿಸುಂತಾಗಿತ್ತು. ಗ್ರೇಡ್​-2 ತಹಸೀಲ್ದಾರ್​ ಹಂಸಮರಿಯ ಅವರು ಶುಕ್ರವಾರ ಸಿಬ್ಬಂದಿಯನ್ನು ನೇಮಕ ಮಾಡಿದ್ದು, ಇಲ್ಲೂ ಒಂದಷ್ಟು ಗೊಂದಲಗಳನ್ನಿಟ್ಟು ಸಮಸ್ಯೆಗೆ ತಾತ್ಕಾಲಿಕ ಸೇವೆ ಒದಗಿಸುವಲ್ಲಿ ಮುಂದಾಗಿದ್ದಾರೆ.

ಆಪರೇಟರ್​ ಸಮಸ್ಯೆ ಕುರಿತು ಡಿ.19ರಂದು ವಿಜಯವಾಣಿಯಲ್ಲಿ "ಆಪರೇಟರ್​ ಇಲ್ಲದೇ ಆಧಾರ್​ಗಾಗಿ ಪರದಾಟ' ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು. ವರದಿಗೆ ಎಚ್ಚೆತ್ತ ಗ್ರೇಡ್​ ತಹಸೀಲ್ದಾರ್​ ಕೋಲಾರದಲ್ಲಿ ಆಧಾರ್​ ಆಪರೇಟರ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ನಿತಿನ್​ ಅವರನ್ನು ವೇಮಗಲ್​ ಕಚೇರಿಯಲ್ಲೂ ಕೆಲಸ ಮಾಡುವಂತೆ ಸೂಚಿಸಿದ್ದು, ಶುಕ್ರವಾರದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಆಧಾರ್​ ತಿದ್ದುಪಡಿಗೆ ಕಾಯಂ ನೌಕರನನ್ನು ನೀಡುವಂತೆ ಜನರು ಆಗ್ರಹಿಸಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಆಧಾರ್​ಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಯಾವುದೇ ತೊಂದರೆಯಾದಂತೆ ಕ್ರಮವಹಿಸಲು ಕನ್ಸಲ್ಟೆನ್ಸಿ ಅವರಿಗೆ ಗ್ರೇಡ್​ ತಹಸೀಲ್ದಾರ್​ ಸೂಚನೆ ನೀಡಿದ್ದಾರೆ.

ಶ್ರೀದಲ್ಲೆ ವೇಮಗಲ್​ ನಾಡಕಚೇರಿಗೆ ಹೊಸ ಆಪರೇಟರ್​ ನಿಯೋಜನೆ ಮಾಡುತ್ತೇವೆ ಎಂದು ಕನ್ಸಲ್ಟೆನ್ಸಿ ಹೇಳಿದ್ದು, ಅಲ್ಲಿಯವರೆಗೂ ನಿತಿನ್​ ಎಂಬುವವರು ಕಾರ್ಯನಿರ್ವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net