

ಬೆಂಗಳೂರು: ಎಚ್‌ಎಎಲ್ ಸಮೀಪದ ಮಾರತ್‌ಹಳ್ಳಿ ಬ್ರಿಡ್ಜ್ ಬಳಿಯ ಕೆಎಲ್‌ಎಂ ಮಾಲ್ ಮುಂದಿನ ಡಿವೈಡರನ್ನು ತಾತ್ಕಾಲಿಕವಾಗಿ ಮಂಗಳವಾರ ಬೆಳಗ್ಗೆ 6 ರಿಂದ ಮಧ್ಯಾಹ್ನ 3 ಗಂಟೆ ವರೆಗೂ ಮುಚ್ಚಲಾಗಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.
ಹೊರ ವರ್ತುಲ ರಸ್ತೆಯಿಂದ ಕುಂದಲಹಳ್ಳಿ ಮತ್ತು ವರ್ತೂರು ಕಡೆಗೆ ಚಲಿಸುವ ವಾಹನಗಳು ತುಳಸಿ ಚಿತ್ರಮಂದಿರ ಜಂಕ್ಷನ್ ಬಳಿ ಯು ಟರ್ನ್ ಪಡೆದು ಕುಂದಲಹಳ್ಳಿ ಕಡೆಗೆ ಸಾಗಲು ಎಚ್‌ಎಎಲ್ ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ.