ವಾರದೊಳಗೆ ದೇವಳಗಳಲ್ಲಿ ಸೇವೆಗೆ ಚಿಂತನೆ

Kukke 14 jan 20
Published on

ಸುಬ್ರಹ್ಮಣ್ಯ: ರಾಜ್ಯದ ಮುಜರಾಯಿ ದೇವಳಗಳಲ್ಲಿ ಸೇವೆಗಳನ್ನು ಆರಂಭಿಸಬೇಕು ಎಂಬ ಬೇಡಿಕೆ ಭಕ್ತರಿಂದ ಬರುತ್ತಿದೆ. ಆರಂಭಿಕ ಹಂತವಾಗಿ ಕುಂಕುಮಾರ್ಚನೆ, ಅಭಿಷೇಕ ಮುಂತಾದ ಸಣ್ಣ ಸೇವೆಗಳನ್ನು ಆರಂಭಿಸುವ ಚಿಂತನೆ ಇದೆ. ಆರೋಗ್ಯ ಇಲಾಖೆಯೊಂದಿಗೆ ರ್ಚಚಿಸಲಿದ್ದು, ಅನುಮತಿ ನೀಡಿದರೆ ವಾರದೊಳಗೆ ಸಾಮಾನ್ಯ ಸೇವೆಗಳು ಆರಂಭವಾಗಲಿವೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಆದರ್ಶ ಗ್ರಾಮ ಬಳ್ಪದ ಎಣ್ಣೆಮಜಲಿಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎ ದರ್ಜೆಯ 80ಕ್ಕೂ ಅಧಿಕ ದೇವಸ್ಥಾನಗಳಿಗೆ ರಾಜ್ಯ ಧಾರ್ವಿುಕ ಪರಿಷತ್ ಮೂಲಕ ವ್ಯವಸ್ಥಾಪನಾ ಸಮಿತಿ ರಚಿಸಲು ನಿರ್ಣಯಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸದಸ್ಯರಾಗಲು ಅರ್ಜಿ ಹಾಕಿದವರ ಬಗ್ಗೆ ಪೊಲೀಸ್ ಪರಿಶೀಲನೆ ಸೇರಿ ಇತ್ಯಾದಿ ಕ್ರಮಗಳು ತ್ವರಿತಗತಿಯಲ್ಲಿವೆ ಎಂದರು.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಬೇಕು ಎಂದು ಅನೇಕರು ಸಲಹೆ ನೀಡಿದ್ದಾರೆ. ಆದರೆ ಕೆಲವರಲ್ಲಿ ವ್ಯವಸ್ಥಾಪನಾ ಸಮಿತಿ ಆಗಬೇಕೆಂಬ ಕಲ್ಪನೆ ಇದೆ. ಶೀಘ್ರವೇ ಈ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಸಚಿವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net