ದೇವಾಲಯ ಉದ್ಘಾಟನೆಗೆ ಸಿದ್ಧ

ARK- 28- TempLe
Published on

 ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜನೆ

ಅರಕಲಗೂಡು: ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಅ. 30 ಮತ್ತು 31 ರಂದು ಶ್ರೀ ಬಸವೇಶ್ವರಸ್ವಾಮಿ ದೇವಾಲಯ ಉದ್ಘಾಟನೆಗೊಳ್ಳಲಿದೆ. ಈ ಸಂದರ್ಭ ಶ್ರೀ ಬಸವೇಶ್ವರಸ್ವಾಮಿ ನೂತನ ಶಿಲಾಮೂರ್ತಿ ಮರು ಪ್ರತಿಷ್ಠಾಪನೆ, ಗೋಪುರ ಕಳಸರೋಹಣ ಹಾಗೂ ಧಾರ್ಮಿಕ ಸಮಾರಂಭ ನಡೆಯಲಿದೆ.

ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ದೇವಾಲಯ ಲೋಕಾರ್ಪಣೆ ಸಂದರ್ಭ ಬೆಟ್ಟದಪುರ ಸಲೀಲಾಕ್ಯ ಮಠದ ಶ್ರೀ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ತೇಜೂರು ಮಠದ ಶ್ರೀ ಕಲ್ಯಾಣ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ.

ಅರೆಮಾದನಹಳ್ಳಿ ಮಠದ ಜಗದ್ಗುರು ಶ್ರೀ ಶಿವ ಸುಜ್ಜಾನತೀರ್ಥ ಸ್ವಾಮೀಜಿ, ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಚಿಲುಮೆ ಮಠದ ಜಯದೇವ ಸ್ವಾಮೀಜಿ, ಶೆಟ್ಟಿಗೊಂಡನಹಳ್ಳಿ ದುಮ್ಮಿಶಾಲ್ಯ ಹಳ್ಳಿಕಾರ ಮಠದ ಶ್ರೀ ಬಾಲಕೃಷ್ಣನಂದ ಸ್ವಾಮೀಜಿ, ಕೆಸವತ್ತೂರು ಮಠದ ಶ್ರೀ ಬಸವರಾಜೇಂದ್ರ ಸ್ವಾಮಿಜಿ, ದಿಂಡಗಾಡು ಮಠದ ಅಪ್ಪಾಜಿ ಸ್ವಾಮೀಜಿ, ಕೊಡಗು ಜಿಲ್ಲೆ ಕೂಡ್ಲೂರು ಮಠದ ಸಿದ್ದಮಲ್ಲಿಕಾರ್ಜುನ ಸ್ವಾಮೀಜಿ ಭಾಗವಹಿಸಲಿದ್ದಾರೆಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net