ಒಬ್ಬ ವ್ಯಕ್ತಿಯ ಅಹಂಕಾರದಿಂದಾಗಿ ಇಡೀ ಟಾಲಿವುಡ್​ ಸಿಎಂ ಮುಂದೆ ಕೈಮುಗಿದು ನಿಂತಿದೆ; Allu Arjun ವಿರುದ್ಧ ಖ್ಯಾತ ನಿರ್ದೇಶಕ ವಾಗ್ದಾಳಿ

Allu Reddy
Published on

ಹೈದರಾಬಾದ್​: ಡಿಸೆಂಬರ್​ 04ರಂದು ಹೈದರಾಬಾದಿನ ಸಂಧ್ಯಾ ಚಿತ್ರಮಂದಿರದಲ್ಲಿ ಸಂಭವಿಸಿದ್ದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ನಟ  ಅಲ್ಲು ಅರ್ಜುನ್​ (Allu Arjun) ಹಾಗೂ ತೆಲಂಗಾಣ ಸಿಎಂ ರೇವಂತ್​ ರೆಡ್ಡಿ (Revanth Reddy) ನಡುವಿನ ಮುಸುಕಿನ ಗುದ್ದಾಟ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಟಾಲಿವುಡ್​ನ ನಟರು, ನಿರ್ದೇಶಕರು, ನಿರ್ಮಾಪಕರು, ವಿತರಕರು ಸಿಎಂರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಇನ್ನೂ ಘಟನೆ ನಡೆದು ತಿಂಗಳಾಗುತ್ತ ಬಂದರು ಅಲ್ಲು ಅರ್ಜುನ್ (Allu Arjun)​ ವಿರುದ್ಧ ಸೆಲೆಬ್ರಿಟಿಗಳು ವಾಗ್ದಾಳಿ ಮುಂದುವರೆಸುತ್ತಿದ್ಧಾರೆ. ಇದೀಗ ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ, ನಿರ್ದೇಶಕ ತಮ್ಮಾರೆಡ್ಡಿ ಭಾರಧ್ವಾಜ್​ ಅಲ್ಲು ಅರ್ಜುನ್​ ವಿರುದ್ಧ ವಾಗ್ದಾಳಿ ನಡೆಸಿದ್ದು, ಒಬ್ಬ ವ್ಯಕ್ತಿಯ ಅಹಂಕಾರದಿಂದಾಗಿ ಇಂದು ಟಾಲಿವುಡ್, ಸಿಎಂ ರೇವಂತ್ ರೆಡ್ಡಿ ಮುಂದೆ ಕೈಮುಗಿದು ನಿಲ್ಲುವಂತಾಗಿದೆ ಎಂದು ಕಿಡಿಕಾರಿದ್ದಾರೆ.

ಈ ಸಂಬಂಧ ವಿಡಿಯೋ ಪೋಸ್ಟ್ ಮಾಡಿರುವ ತಮ್ಮಾರೆಡ್ಡಿ, ಐಕಾನ್​ ಸ್ಟಾರ್​ ಅಲ್ಲು ಅರ್ಜುನ್​ (Allu Arjun) ಮಾಡಿದ ಒಂದು ತಪ್ಪಿನಿಂದಾಗಿ ಇಂದು ಇಡೀ ಟಾಲಿವುಡ್​ ಸಿಎಂ ರೇವಂತ್​ ರೆಡ್ಡಿ ಅವರ ಮುಂದೆ ಕೈಕಟ್ಟಿಕೊಂಡು ನಿಂತಿದೆ. ಒಬ್ಬ ಸ್ಟಾರ್​ ನಟನಿಗೆ ಇರಬೇಕಾದ ಗುಣಲಕ್ಷಣ ಅಲ್ಲು ಅರ್ಜುನ್​ರಲ್ಲಿ ಇಲ್ಲ. ಸಿಂಗಲ್​ಸ್ಕ್ರೀನ್​ ಥಿಯೇಟರ್​ಗಳಲ್ಲಿ ಸಿನಿಮಾ ನೋಡಲು ಒಬ್ಬ ಸ್ಟಾರ್ ನಟ ತೆರಳಿದಾಗ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ ಮತ್ತು ಏನಾದರು ಅನಾಹುತವಾಗುತ್ತದೆ ಎಂಬುದು ಗೊತ್ತಿದ್ದರೂ ಅಲ್ಲು ಅರ್ಜನ್ ಅಲ್ಲಿ ಹೋಗಿ ತಪ್ಪು ಮಾಡಿದರು.

ಅಲ್ಲು ಅರ್ಜುವ್​ (Allu Arjun) ಸಾರ್ವಜನಿಕವಾಗಿ ಹೇಗಿರಬೇಕು ಎಂಬುದನ್ನು ಹಿರಿಯ ಸ್ಟಾರ್ ನಟರನ್ನು ನೋಡಿ ಕಲಿಯಬೇಕಿದೆ. ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆಯಾದಾಗ ಮಲ್ಟಿಫ್ಲೆಕ್ಸ್‌ಗಳಿಗೆ ಹೋಗಿ, ಔಪಚಾರಿಕವಾಗಿ ಅಭಿಮಾನಿಗಳನ್ನು ಭೇಟಿಯಾಗಿ ಬರುತ್ತಾರೆ. ಅಲ್ಲು ಕೂಡ ಹಾಗೇ ಮಾಡಬಹುದಿತ್ತು. ಈ ಘಟನೆ ನಡೆಯಬಾರದಿತ್ತು. ಹೇಗೆ ನಡೆಯಿತು ಎಂಬುದರ ಬಗ್ಗೆ ನಾವು ಪರಮಾರ್ಶಿಸಬೇಕಿದೆ ಎಂದು ಖ್ಯಾತ ನಿರ್ಮಾಪಕ, ನಿರ್ದೇಶಕ ತಮ್ಮಾರೆಡ್ಡಿ ಭಾರಧ್ವಾಜ್​ ಅಲ್ಲು ಅರ್ಜುನ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net