ಎಷ್ಟೇ ಪ್ರಯತ್ನಿಸಿದರೂ ಚೆನ್ನಾಗಿ ಓದಲು ಸಾಧ್ಯವಾಗುತ್ತಿಲ್ಲ ಅಂತಾ ದುಡುಕಿನ ನಿರ್ಧಾರ ತೆಗೆದುಕೊಂಡ ವಿದ್ಯಾರ್ಥಿನಿ

Girl
Published on

ಹೈದರಾಬಾದ್​: ಚೆನ್ನಾಗಿ ಓದಲು ಸಾಧ್ಯವಾಗುತ್ತಿಲ್ಲ ಅಂತಾ ಯುವತಿಯೊಬ್ಬಳು ಸಾವಿನ ಹಾದಿ ಹಿಡಿದಿರುವ ಘಟನೆ ತೆಲಂಗಾಣದ ಮಹೆಬೂಬಬಾದ್​ ಜಿಲ್ಲೆಯ ದೊರ್ನಾಕಲ್​ ಮಂಡಲದಲ್ಲಿ ಶುಕ್ರವಾರ ನಡೆದಿದೆ.

ಶ್ವೇತಾ (19) ಮೃತ ಯುವತಿ. ಖಮ್ಮಮ್​ ಜಿಲ್ಲೆಯಲ್ಲಿ ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿನಿಯಾಗಿದ್ದಳು. ಇತ್ತೀಚೆಗೆ ನಡೆದ ಪರೀಕ್ಷೆಯಲ್ಲೂ ಸಹ ಫೇಲ್​ ಆಗಿದ್ದಳು. ಇದರಿಂದ ಖಿನ್ನತೆಗೆ ಜಾರಿದ್ದಳು. ಎಷ್ಟೇ ಪ್ರಯತ್ನ ಪಟ್ಟರೂ ಉತ್ತಮವಾಗಿ ಅಧ್ಯಯನ ಸಾಧ್ಯವಾಗುತ್ತಿಲ್ಲ ಅಂತಾ ಮನನೊಂದು ವಿಷ ಕುಡಿದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಕೀಟನಾಶಕ ಸೇವಿಸಿದ್ದಳು. ತೀವ್ರ ಅಸ್ವಸ್ಥಳಾಗಿದ್ದ ಆಕೆಯನ್ನು ಪಾಲಕರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಡೆತ್​ನೋಟ್​ ಪತ್ತೆಯಾಗಿದ್ದು, ಸಾವಿಗೆ ನಾನೇ ಹೊಣೆ ಎಂದು ಬರೆದಿದ್ದಾಳೆ. ಎಷ್ಟು ಓದಿದರೂ ತಲೆ ಹತ್ತುತ್ತಿಲ್ಲ. ನಾನು ಉತ್ತಮ ವಿದ್ಯಾಭ್ಯಾಸ ಮಾಡಲು ಆಗುತ್ತಿಲ್ಲ ಅಂತಾ ಮನದ ನೋವನ್ನು ಶ್ವೇತಾ ಹಂಚಿಕೊಂಡಿದ್ದಾಳೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net