ಮಟನ್ ಕರಿ ಮಾಡದ ಹೆಂಡ್ತಿಯನ್ನು ಬರ್ಬರವಾಗಿ ಹತ್ಯೆಗೈದ ಪತಿ..Mutton Curry

Mutton Curry
Published on

ತೆಲಂಗಾಣ: ಮಟನ್ ಕರಿ ( Mutton Curry ) ಮಾಡಿಲ್ಲವೆಂದು ಎಂದು  ಪತ್ನಿಯನ್ನೇ ಹೊಡೆದು ಕೊಂದು ಪತಿ ಪರಾರಿಯಾಗಿದ್ದಾನೆ. ಮಹಬೂಬಾಬಾದ್ ಜಿಲ್ಲೆಯ ಸೀರೋಲ್ ಮಂಡಲದ ಮಂಜತ್ತಂಡದಲ್ಲಿ ಈ ದುಷ್ಕೃತ್ಯ ನಡೆದಿದೆ.

ಮಾಲೋತ್ ಬಾಲು ಎಂಬ ವ್ಯಕ್ತಿ ತನ್ನ ಪತ್ನಿ ಮಾಲೋತ್ ಕಲಾವತಿಯನ್ನು ಕೋಲಿನಿಂದ ಕ್ರೂರವಾಗಿ ಹೊಡೆದು ಕೊಂದಿದ್ದಾನೆ. ಮಂಗಳವಾರ ರಾತ್ರಿ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಈ ಘಟನೆ ನಡೆದಿದೆ. ಕುರಿ ಮಾಂಸಕ್ಕಾಗಿ ಗಂಡ ಹೆಂಡತಿ ನಡುವೆ ಜಗಳವಾಯಿತು ಎನ್ನಲಾಗಿದೆ.

ಊಟಕ್ಕೆ ಮಟನ್​ ಕರಿ ಮಾಡಲು ಹೇಳಿದ್ದಾನೆ. ಆದರೆ ಪತ್ನಿ ಬಾಡೂಟ ಮಾಡಿರಲಿಲ್ಲ. ಕೋಪಗೊಂಡ ಪತಿ, ಕೋಲಿನಿಂದ ಹೆಂಡತಿಯ ಮೇಲೆ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳೀಯರು ಕಲಾವತಿಯನ್ನು ಗಮನಿಸಿ ಆಸ್ಪತ್ರೆಗೆ ಕರೆದೊಯ್ದರು, ಆಕೆಯ ತಲೆ ಮತ್ತು ಕುತ್ತಿಗೆಗೆ ತೀವ್ರ ಗಾಯಗಳಾಗಿದ್ದವು. ಆದರೆ ಅವಳು ಆಗಲೇ ಸತ್ತಿದ್ದಳು.
ಮೃತ ಮಹಿಳೆಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಹಬೂಬಾಬಾದ್ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಯಿತು. ಈ ಮಧ್ಯೆ, ತಲೆಮರೆಸಿಕೊಂಡಿರುವ ಆರೋಪಿಗಳನ್ನು ಹಿಡಿಯುವಲ್ಲಿ ಪೊಲೀಸರು ನಿರತರಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net