Telangana: ರೈತರಿಗೆ ಗುಡ್ ನ್ಯೂಸ್..2ತಿಂಗಳಲ್ಲೇ ಬ್ಯಾಂಕ್​ ಖಾತೆಗೆ ಬೆಳೆ ಪರಿಹಾರ!

Telangana
Published on

ಹೈದರಾಬಾದ್​: ದಸರಾ ಸಂದರ್ಭದಲ್ಲಿ ತೆಲಂಗಾಣದ ರೇವಂತ್ ರೆಡ್ಡಿ ಸರ್ಕಾರ ರೈತರಿಗೆ ಸಿಹಿ ಸುದ್ದಿ ನೀಡಿದೆ. ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿ ಸಂಕಷ್ಟದಲ್ಲಿದ್ದ ರೈತರ ಖಾತೆಗಳಿಗೆ 10 ಸಾವಿರ ರೂ.ಜಮಾ ಮಾಡುವುದಾಗಿ ಘೋಷಿಸಿದ್ದಾರೆ.

ಉಭಯ ತೆಲುಗು ರಾಜ್ಯಗಳಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಅನ್ನಧಾತರು ಬೆಳೆ ಕಳೆದುಕೊಂಡು ಭಾರಿ ನಷ್ಟ ಅನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ತೆಲಂಗಾಣದ ಸರ್ಕಾರ ಬೆಳೆ ನಷ್ಟ ಪರಿಹಾರವಾಗಿ ಎಕರೆಗೆ 10 ಸಾವಿರ ರೂ. ನೀಡುವುದಾಗಿ ರೇವಂತ್​ರೆಡ್ಡಿ ಘೋಷಿಸಿದ್ದರು, ಎಲ್ಲ ರೈತರಿಗೆ ಎಕರೆಗೆ 10 ಸಾವಿರ ರೂ.ಬ್ಯಾಂಕ್​ ಖಾತೆಗಳಿಗೆ ಹಾಕುವುದಾಗಿ ಘೋಷಿಸಿದ್ದಾರೆ.

ರೇವಂತ್ ರೆಡ್ಡಿ ಸರ್ಕಾರ ಈಗಾಗಲೇ ಸಂತ್ರಸ್ತ ರೈತರ ಪಟ್ಟಿಯನ್ನು ಸಿದ್ಧಪಡಿಸಿದೆ. ಅವರಿಗೆ ಪರಿಹಾರ ನೀಡಲು ಹಣವನ್ನೂ ಬಿಡುಗಡೆ ಮಾಡಿದೆ. 79.57 ಕೋಟಿಗೂ ಹೆಚ್ಚು ವೆಚ್ಚವಾಗಿದೆ. ಈ ಕುರಿತು ಆದೇಶವನ್ನೂ ಹೊರಡಿಸಲಾಗಿದೆ.

ಆಗಸ್ಟ್ ತಿಂಗಳಲ್ಲಿ ಸುರಿದ ಭಾರಿ ಮಳೆಗೆ ಮಹಬೂಬ್​ನಗರ, ಸೂರ್ಯಪೇಟ ಮತ್ತಿತರ ಪ್ರದೇಶಗಳಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿತ್ತು. ಪರಿಹಾರವನ್ನು ನೇರ ರೈತರ ಖಾತೆಗೆ ಜಮಾ ಮಾಡಲು ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ ಎನ್ನಲಾಗಿದೆ. ಬೆಳೆ ನಷ್ಟವಾದ ಎರಡು ತಿಂಗಳಲ್ಲೇ ಸರ್ಕಾರ ನಷ್ಟಪರಿಹಾರ ಒದಗಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net