

ನವದೆಹಲಿ: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನದ್ದು ಗಾಳಿಪಟದ ಗೆಲುವು. ಆದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹರಿದ ಗಾಳಿಪಟವಾಗಲಿದೆ ಎಂದು ಬಿಜೆಪಿ ಸಂಸದ ಲಕ್ಷ್ಮಣ್ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಭರಪೂರ ಭರವಸೆ ನೀಡಿ ಜನರನ್ನು ದಿಕ್ಕುತಪ್ಪಿಸಿ ಅಧಿಕಾರಕ್ಕೆ ಬಂದಿದೆ. ಆದರೆ ಗೆಲ್ಲಿಸಿದ ಜನರಿಗೆ ಕಾಂಗ್ರೆಸ್ಗೆ ಮತಹಾಕಿ ಕೆಟ್ಟೆವೆಂಬ ಅನುಭವ ಈಗ ಆಗುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಕುಟುಂಬ ಆಡಳಿತದ ವಿರುದ್ಧ ಜನರು ಮತ ಹಾಕಲಿದ್ದಾರೆ ಎಂದು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಎಲ್ಲ 17 ಸ್ಥಾನಗಳಲ್ಲೂ ಕಠಿಣ ಪೈಪೋಟಿ ನೀಡಿ, 10ಕ್ಕೆ ಕಡಿಮೆ ಇಲ್ಲದಂತೆ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮತ್ತು INDIA ಒಕ್ಕೂಟದ ನಡುವೆ ರಹಸ್ಯ ಒಪ್ಪಂದವಾಗಿದ್ದು, ಬಿಜೆಪಿ ಸೋಲಿಸಲು ಪರಸ್ಪರ ಸಹಕರಿಸುತ್ತಿವೆ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ನಿಂದ ಬೇಸತ್ತು ತಮಗೆ ಭವಿಷ್ಯವಿಲ್ಲ ಎಂಬ ಉದ್ದೇಶದಿಂದ ಕೆಲವು ಪಕ್ಷಗಳು, ಮುಖಂಡರು ಹೊರ ಬರುತ್ತಿದ್ದಾರೆ ಎಂದರು.