ತೇಜಸ್ವಿನಿ ಅನಂತಕುಮಾರ್ ಭೇಟಿ ವದಂತಿಗೆ ತೆರೆ ಎಳೆದ ಡಿಕೆಶಿ

Tejaswini met DKS
Published on

ಬೆಂಗಳೂರು: ‘ಆಪರೇಷನ್ ಹಸ್ತ’ದ ವದಂತಿಯು ರಾಜಕಾರಣಿಗಳ ಸೌಜನ್ಯದ ಭೇಟಿಯೂ ರಾಜಕೀಯ ಬಣ್ಣ ಬಳಿದುಕೊಳ್ಳುತ್ತಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಸೋಮವಾರದ ಭೇಟಿಯೂ ಇಂತಹುದೇ ಚರ್ಚೆಗೆ ಗ್ರಾಸವಾಯಿತು.

ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಹುಟ್ಟು ಹಾಕಿದೆ ಎಂದು ತಿಳಿದ ಡಿ.ಕೆ.ಶಿವಕುಮಾರ್, ರಾಜಕೀಯ ವಿಚಾರ ಚರ್ಚೆಯೇ ಆಗಿಲ್ಲವೆಂದು ಹೇಳಿ ವದಂತಿಗೆ ತೆರೆ ಎಳೆದಿದ್ದಾರೆ. ಇದಕ್ಕೂ ಮುನ್ನ ಕುಮಾರಕೃಪಾ ಅತಿಥಿಗೃಹದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ತೇಜಸ್ವಿನಿಕುಮಾರ್ ಭೇಟಿಯಾದಾಗ ರಾಜಕೀಯ ಹೊರತಾದ ಬೇರೆ ವಿಷಯಗಳ ಬಗ್ಗೆ ಚರ್ಚೆಯಾಗಿದೆ.

ಇದೇ ಸಂದರ್ಭದಲ್ಲಿ ತಮ್ಮ ಪತಿ, ಕೇಂದ್ರದ ಮಾಜಿ ದಿವಂಗತ ಅನಂತಕುಮಾರ್ ಅವರ ಜನ್ಮ ದಿನ ಕಾರ್ಯಕ್ರಮ ಆಯೋಜನೆ, ಅನ್ನಭಾಗ್ಯ ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ಅಲ್ಲದೆ, ಅದಮ್ಯಚೇತನ ಟ್ರಸ್ಟ್‌ನಿಂದ ಇಂದಿರಾ ಕ್ಯಾಂಟೀನ್‌ಗೆ ಆಹಾರ ಪೂರೈಸಿದ ಬಿಲ್‌ಗಳ ಕಡತವನ್ನು ಡಿ.ಕೆ.ಶಿವಕುಮಾರ್ ಮುಂದಿಟ್ಟು, ಆದಷ್ಟು ಬೇಗ ಪಾವತಿಗೆ ಕ್ರಮವಹಿಸಲು ತೇಜಸ್ವಿನಿ ಅನಂತಕುಮಾರ್ ಕೋರಿದರು ಎಂದು ಮೂಲಗಳು ತಿಳಿಸಿವೆ.

ತೇಜಸ್ವಿನಿ ಅನಂತಕುಮಾರ್ ಭೇಟಿ ವೇಳೆ ಅನಂತ್‌ಕುಮಾರ್ ಕಾರ್ಯಕ್ರಮದ ಬಗ್ಗೆ ಚರ್ಚೆಯಾಗಿದೆ. ಯಾವುದೇ ರಾಜಕೀಯ ವಿಚಾರ ಚರ್ಚಿಸಿಲ್ಲ. ಹಾಗೆ ಯಾರಾದರೂ ಹೇಳಿದ್ದರೆ ಸುಳ್ಳು. ಈ ರೀತಿ ಟ್ವೀಟ್ ಆಗಿದ್ದರೆ ಕ್ಷಮೆಯಿರಲಿ, ನನ್ನ ಹೆಸರಿನಲ್ಲಿ ಟ್ವೀಟ್ ಮಾಡಿದವರನ್ನು ಕೂಡಲೇ ತೆಗೆದುಹಾಕುವೆ. - ಡಿ.ಕೆ.ಶಿವಕುಮಾರ್, ಡಿಸಿಎಂ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net