VIDEO| ಯುವತಿಯ ರೋಲರ್ ಕೋಸ್ಟರ್ ಖುಷಿಯನ್ನ ಹಾಳು ಮಾಡ್ತು ಆ ಒಂದು ಪಕ್ಷಿ!

roller coaster
Published on

ವಾಷಿಂಗ್ಟನ್: ರೋಲರ್ ಕೋಸ್ಟರ್ ಹತ್ತೋದು ಅನೇಕರ ಕನಸಾಗಿರುತ್ತೆ. ಕುಳಿತ ಸೀಟನ್ನೇ ಒಮ್ಮೆಲೆ ಮೇಲೆ ಕರೆದೊಯ್ದು ಅಡ್ಡಾದಿಡ್ಡಿಯಾಗಿ ತಲೆ ಕೆಳಗೆ ಮಾಡಿ ಹಲವಾರು ಸುತ್ತಿ ಆಟ ಆಡಿಸಿ ತಂದು ನಿಲ್ಲಿಸುವ ಆಟವನ್ನು ಆಡಲು ಅಷ್ಟೇ ಧೈರ್ಯವಿರಬೇಕು ಕೂಡ. ಅದೇ ರೀತಿ ಧೈರ್ಯದಿಂದ ಆಟವಾಡಲು ಮುಂದಾಗಿದ್ದ ಯುವತಿಯೊಬ್ಬಳಿಗೆ ಬಂದ ದುಸ್ಥಿತಿ ನೀವೇ ನೋಡಿ.

ಅಮೆರಿಕದ ನ್ಯೂಜೆರ್ಸಿಯಲ್ಲಿ ಇಬ್ಬರು ಯುವತಿಯರು ರೋಲರ್ ಕೋಸ್ಟರ್ ಆಡಲು ಮುಂದಾಗಿದ್ದಾರೆ. ಗಟ್ಟಿ ಕುಳಿತು ಎಂಜಾಯ್ ಮಾಡಲು ಸಿದ್ಧವಾಗಿದ್ದ ಅವರ ಆಟ ಒಮ್ಮೆಲೆ ಆರಂಭವಾಗುತ್ತದೆ. ರೋಲರ್ ಸ್ವಲ್ಪ ದೂರ ಮುಂದೆ ಹೋಗುತ್ತಿದ್ದಂತೆಯೇ ಕಡಲಕಾಗೆ (ಸೀಗಲ್)ಯೊಂದು ಒಬ್ಬ ಯುವತಿಯ ಕುತ್ತಿಗೆಗೆ ಬಂದು ಬಡಿಯುತ್ತದೆ. ಮೊದಲೇ ಆಟದ ಭಯ ಮತ್ತು ಉತ್ಸಾಹದಲ್ಲಿದ್ದ ಯುವತಿಗೆ ಆ ಪಕ್ಷಿ ಕಂಡು ಇನ್ನಷ್ಟು ಭಯವಾಗುತ್ತದೆ.

ಆದರೂ ಧೈರ್ಯ ತಂದುಕೊಳ್ಳುವ ಯುವತಿ ತನ್ನ ಎಡಗೈನಲ್ಲಿ ಹಕ್ಕಿಯನ್ನು ತೆಗೆಯುತ್ತಾಳೆ. ಅದನ್ನು ಪಕ್ಕಕ್ಕೆ ಬಿಡುತ್ತಾಳೆ. ಈ ಎಲ್ಲ ದೃಶ್ಯ ಅಲ್ಲಿದ್ದ ಕ್ಯಾಮರಾದಲ್ಲಿ ಸೆರೆಯಾಗಿದೆ. ಯೂಟ್ಯೂಬ್​ನಲ್ಲಿ ಹಾಕಲಾಗಿರುವ ವಿಡಿಯೋವನ್ನು ಸಾವಿರಾರು ಜನರು ನೋಡಿ ಮೆಚ್ಚುಗೆ ವ್ಯಕ್ತಪಡಿಸಲಾರಂಭಿಸಿದೆ. ಸದ್ಯ ವಿಡಿಯೋ ವೈರಲ್ ಆಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net