ತಾಂತ್ರಿಕ ದೋಷ ನಿವಾರಣೆಗೆ ಕ್ರಮ

hos sabhe
ಹೊಸನಗರದಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಎಚ್.ಬಿ.ಚಿದಂಬರ್, ನರೇಂದ್ರಕುಮಾರ್, ಶಿವಕುಮಾರ್, ಪವನ್‌ಕುಮಾರ್, ಸಿಂಥಿಯಾ ಸೆರಾವೋ, ಸುಮಂಗಳಾ ಇತರರಿದ್ದರು.
Published on

ಹೊಸನಗರ: ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ವ್ಯಾಪಕ ಸರ್ವರ್ ಸಮಸ್ಯೆ ಆಗುತ್ತಿರುವುದರಿಂದ ಜಿಲ್ಲಾ ಮಟ್ಟದ ನಿಯೋಗ ತೆರಳಿ ಯೋಜನೆಯ ರಾಜ್ಯಾಧ್ಯಕ್ಷರ ಭೇಟಿ ಮಾಡಿ ಗಮನಕ್ಕೆ ತರಲಾಗುವುದು ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಬಿ.ಚಿದಂಬರ್ ತಿಳಿಸಿದರು.

ತಾಪಂ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಅರ್ಜಿ ಸಲ್ಲಿಕೆಗೆ ಇರುವ ತಾಂತ್ರಿಕ ತೊಡಕುಗಳನ್ನು ಶೀಘ್ರ ಬಗೆಹರಿಸಲಾಗುವುದು ಎಂದರು.

ಸಿಡಿಪಿಒ ಗಾಯತ್ರಿ ಮಾತನಾಡಿ, ತಾಲೂಕಿನಲ್ಲಿ ಈವರೆಗೆ 29,011 ಕಾರ್ಡ್‌ದಾರರ ಪೈಕಿ 26,534 ಮಂದಿ ಗೃಹಲಕ್ಷ್ಮಿ ಯೋಜನೆಯ ಲಾನುಭವಿಗಳಾಗಿದ್ದು, ಉಳಿದ 2437 ಮಂದಿ ಯೋಜನೆಗೆ ಅರ್ಜಿ ಸಲ್ಲಿಸಿಲ್ಲ. ಇಂದಿಗೆ 265 ಲಾನುಭವಿಗಳಲ್ಲಿ 154 ಜನರಿಗೆ ಹಣ ಸಂದಾಯವಾಗಿದೆ. ಆಧಾರ್ ಲಿಂಕ್ ಆಗದ ಕಾರಣ 111 ಜನರಿಗೆ ಹಣ ಜಮಾ ಆಗಿಲ್ಲ. 157 ಮಂದಿ ಮರಣ ಹೊಂದಿದ್ದು, ಮರಣಪತ್ರ ಸಲ್ಲಿಸಿದ ಬಳಿಕ 80 ಜನರಿಗೆ ಬಿಲ್ಲಿಂಗ್‌ಗೆ ಹೋಗಿದೆ. 35 ಲಾನುಭವಿಗಳ ಹೆಸರು ಇನ್ನೂ ಬದಲಾವಣೆ ಆಗಿಲ್ಲ. 42 ಲಾನುಭವಿಗಳ ಹೆಸರು ಬದಲಾವಣೆಗಳಾಗಿವೆ ಎಂದು ಸಭೆಗೆ ಮಾಹಿತಿ ನೀಡಿದರು.

ಗೃಹಜ್ಯೋತಿ ಯೋಜನೆಯಡಿ ತಾಲೂಕಿನಲ್ಲಿ ಈವರೆಗೆ ಒಟ್ಟು 5,19,656 ಮೀಟರ್‌ಗಲ ಬಿಲ್ ಮಂಜೂರಾಗಿದೆ. 1,94,95,648 ಯೂನಿಟ್ ವಿದ್ಯುತ್ ಬಳಕೆಯಾಗಿದೆ. 18,39,80,561ರೂ. ಪ್ರಮಾಣದ ಉಚಿತ ವಿದ್ಯುತ್ ನೀಡಲಾಗಿದೆ ಎಂದು ಸಭೆಗೆ ಮೆಸ್ಕಾಂ ಅಧಿಕಾರಿ ತಿಳಿಸಿದರು.

ಕೆಎಸ್‌ಆರ್‌ಟಿಸಿ ಸಾಗರ ವಿಭಾಗದ ಡಿಪೋ ಮ್ಯಾನೇಜರ್ ಎಸ್.ಎಸ್.ಬಿರಾದರ್ ಮಾತನಾಡಿ, ಸಾಗರ ಘಟಕದಲ್ಲಿ ಶಕ್ತಿ ಯೋಜನೆಯಲ್ಲಿ ಡಿಸೆಂಬರ್‌ನಲ್ಲಿ ಒಟ್ಟಾರೆ 15,050 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು, 6,63,114 ರೂ. ಆದಾಯ ಲಭಿಸಿದೆ ಎಂದರು.

ಗ್ಯಾರಂಟಿ ಯೋಜನೆಯ ಜಿಲ್ಲಾ ಸದಸ್ಯ ಅಮೀರ್ ಹಂಜಾ, ಸದಸ್ಯರಾದ ಅನಿಲ್‌ಕುಮಾರ್, ಸಂತೋಷ್ ಮಳವಳ್ಳಿ, ಕರುಣಾಕರ್, ರವೀಂದ್ರ, ರಮೇಶ್, ಮಹೇಂದ್ರ ಬುಕ್ಕಿವರೆ, ಸಿಂಥಿಯಾ ಸೆರಾವೋ, ಸುಮಂಗಳಾ ದೇವರಾಜ್, ತಾಪಂ ಇಒ ನರೇಂದ್ರ ಕುಮಾರ್, ವ್ಯವಸ್ಥಾಪಕ ಶಿವಕುಮಾರ್, ಪಿಡಿಒ ಪವನ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net