ತಾಂತ್ರಿಕ ದೋಷ; ಅಮೆರಿಕಕ್ಕೆ ತೆರಳುತ್ತಿದ್ದ ಏರ್​ ಇಂಡಿಯಾ ವಿಮಾನ ಮುಂಬೈಗೆ ವಾಪಸ್| Air India flight

ವಿಜಯವಾಣಿ (91)
Published on

ಮುಂಬೈ: ಅಮೆರಿಕಕ್ಕೆ ತೆರಳುತ್ತಿದ್ದ ಏರ್​ ಇಂಡಿಯಾ(Air India flight) ವಿಮಾನವೊಂದು ತಾಂತ್ರಿಕ ದೋಷ ಹಿನ್ನೆಲೆ ಇಂದು(ಅ. 22) ಬೆಳಗ್ಗೆ ಮುನ್ನೆಚ್ಚರಿಕೆ ಕ್ರಮವಾಗಿ ಮುಂಬೈ ವಿಮಾನ ನಿಲ್ದಾಣಕ್ಕೆ ವಾಪಸ್ ಆಗಿದ್ದು, ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿದೆ ಎಂದು ವರದಿಯಾಗಿದೆ.

ಇಂದು ಮುಂಬೈನಿಂದ ನ್ಯೂಯಾರ್ಕ್​ಗೆ ಹೊರಟಿದ್ದ AI191 ವಿಮಾನದಲ್ಲಿ ಶಂಕಿತ ತಾಂತ್ರಿಕ ದೋಷದಿಂದಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಟೇಕಾಫ್​ ಆದ ಕೆಲ ಗಂಟೆಗಳಲ್ಲಿ ಸಿಬ್ಬಂದಿ ಮುಂಬೈಗೆ ವಿಮಾನವನ್ನು ವಾಪಸ್ ಹಿಂತಿರುಗಿಸಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಗಿದೆ ಎಂದು ಏರ್​ ಇಂಡಿಯಾ ವಿಮಾನಯಾನ ಸಂಸ್ಥೆ ತಿಳಿಸಿದೆ

ವಿಮಾನ ಲ್ಯಾಂಡ್ ಆದ ಬಳಿಕ ತಪಾಸಣೆ ನಡೆಸಲಾಗಿದೆ. ಹಾಗೆಯೇ ಮುಂಬೈ ಮತ್ತು ನ್ಯೂಯಾರ್ಕ್​ ನಡುವೆ ಕಾರ್ಯನಿರ್ವಹಿಸುತ್ತಿದ್ದ AI191 ಮತ್ತು AI144 ವಿಮಾನಗಳನ್ನು ರದ್ದುಗೊಳಿಸಲಾಯಿತು. ಮುಂಬೈನಲ್ಲಿ ತೊಂದರೆಗೊಳಗಾದ ಪ್ರಯಾಣಿಕರಿಗಾಗಿ ಹೋಟೆಲ್‌ಗಳು ಮತ್ತು ಪರ್ಯಾಯ ವಿಮಾನಗಳನ್ನು ಕಾಯ್ದಿರಿಸಲಾಗಿದೆ ಎಂದು ಏರ್ ಇಂಡಿಯಾ ಹೇಳಿದೆ. ಹಾಗೆಯೇ ನ್ಯೂಯಾರ್ಕ್​ನಲ್ಲಿರುವ ಪ್ರಯಾಣಿಕರಿಗೂ ಸಹ ಸೂಚಿಸಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net