ತಾಂತ್ರಿಕ ದೋಷ; ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಜೈಪುರಕ್ಕೆ ವಾಪಸ್| Air india

Air India
Published on

Air india| ಜೈಪುರದಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಇಂದು (ಜು.25) ಟೇಕ್ ಆಫ್ ಆದ ಕೇವಲ 18 ನಿಮಿಷಗಳ ಬಳಿಕ ಮತ್ತೆ ಜೈಪುರ ನಿಲ್ದಾಣಕ್ಕೆ ವಾಪಸ್​ ಆಗಿದೆ. ವಿಮಾನದ ತಾಂತ್ರಿಕ ಸಮಸ್ಯೆಯನ್ನು ಗಮನಿಸಿದ ಪೈಲಟ್ ಮತ್ತೆ ಜೈಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರಳಿದ್ದಾರೆ.

ಮಾಹಿತಿಯ ಪ್ರಕಾರ, AI-612 ವಿಮಾನವು ಮಧ್ಯಾಹ್ನ 1.35 ಕ್ಕೆ ಜೈಪುರ ವಿಮಾನ ನಿಲ್ದಾಣದಿಂದ ಹೊರಟಿತು ಆದರೆ ಮಧ್ಯಾಹ್ನ 1.58 ಕ್ಕೆ ವಾಪಸ್ಸಾಯಿತು ಎನ್ನಲಾಗಿದೆ. ಇನ್ನೂ ಈ ದೋಷದ ಕುರಿತು ವಿಮಾನಯಾನ ಅಧಿಕಾರಿಗಳು ಯಾವುದೇ ಹೆಚ್ಚಿನ ವಿವರಗಳನ್ನು ಹಂಚಿಕೊಂಡಿಲ್ಲ.

(ಏಜೆನ್ಸೀಸ್)

ಬುಧವಾರ ಸುಮಾರು 160 ಪ್ರಯಾಣಿಕರನ್ನು ಹೊತ್ತು ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ತಾಂತ್ರಿಕ ದೋಷದಿಂದಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ಟೇಕ್‌ಆಫ್ ಅನ್ನು ರದ್ದುಗೊಳಿಸಿತು. ಸಣ್ಣ ತಾಂತ್ರಿಕ ಸಮಸ್ಯೆಯನ್ನು ಪತ್ತೆಹಚ್ಚಿದ ನಂತರ ಸುರಕ್ಷತೆಗೆ ಆದ್ಯತೆ ನೀಡಿ, ಸಿಬ್ಬಂದಿ ಟೇಕ್‌ಆಫ್ ಅನ್ನು ತಿರಸ್ಕರಿಸಲು ನಿರ್ಧರಿಸಿದ್ದಾರೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಕ್ತಾರರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net