

ಬೆಂಗಳೂರು: ಪತ್ನಿ ಮತ್ತು ಆಕೆಯ ಕಟುಂಬಸ್ಥರ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ 24 ಪುಟಗಳ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ಯುಪಿ ಮೂಲದ ಬೆಂಗಳೂರು ಟೆಕ್ಕಿ(Techie) ಸುಭಾಷ್ ಅತುಲ್, ಅತ ರಾಷ್ಟ್ರಪತಿಗೆ ಬರೆದ ಪತ್ರ ಇದೀಗ ಬಹಿರಂಗಗೊಂಡಿದೆ.
ರಾಷ್ಟ್ರಪತಿ ದ್ರೌಪತಿ ಮುರ್ಮುಗೆ ಮೃತ ಸುಭಾಷ್ ಬರೆದ ಪತ್ರದಲ್ಲಿ ಈ ದೇಶದ ಕ್ರಿಮಿನಲ್ ನ್ಯಾಯಾಂಗ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದ್ದಾರೆ. ಅಲ್ಲದೇ, ಇಲ್ಲಸಲ್ಲದ ಕ್ಷುಲಕ ಕಾಣರಣಕ್ಕೆ ಪತ್ನಿಯರು ಗಂಡದಿರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಪ್ರವೃತ್ತಿ ಹೆಚ್ಚಿತ್ತಿದೆ ಎಂದಿರುವ ಅವರು, ಉತ್ತರ ಪ್ರದೇಶದ ನ್ಯಾಯಾಲಯದಲ್ಲಿ ತನ್ನ ವಿರುದ್ಧ ಪತ್ನಿ ಸುಳ್ಳು ಮೊಕದ್ದಮೆ ದಾಖಿಲಿಸುವ ಮೂಲಕ ನನಗೆ ಹೇಗೆ ಕಿರುಕುಳ ನಿಡಿದ್ದಾರೆ ಎಂದು ವಿವವರಿಸಿದ್ದಾರೆ.
"ಇಂದು, ಭಾರತೀಯ ನ್ಯಾಯಾಂಗವು ತನ್ನ ಎಲ್ಲ ಮಿತಿಗಳನ್ನು ದಾಟಿದೆ ಮತ್ತು ಯಾವುದೇ ಹೊಣೆಗಾರಿಕೆಯಿಲ್ಲದೆ ಪ್ರತಿಯೊಂದು ಘಟಕದ ಅಧಿಕಾರವನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ. ನ್ಯಾಯಾಂಗ ಸರ್ವಾಧಿಕಾರದ ಅಡಿಯಲ್ಲಿ ಭಾರತವು ಮೊದಲ ದೇಶವಾಗಬಹುದು" ಎಂದು ಅಧ್ಯಕ್ಷ ದ್ರೌಪದಿ ಮುರ್ಮು ಅವರಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.
'ನಿಷ್ಪಕ್ಷಪಾತ ನ್ಯಾಯ' ದ ಅಗತ್ಯವನ್ನು ಒತ್ತಿಹೇಳುತ್ತಾ, ಉತ್ತರ ಪ್ರದೇಶದ ಟೆಕ್ಕಿ ಭಾರತೀಯ ನ್ಯಾಯಾಂಗವನ್ನು ಅದರ ಪ್ರಸ್ತುತ ಸ್ಥಿತಿಯಲ್ಲಿ ಉಳಿಯಲು ಅನುಮತಿಸಲಾಗುವುದಿಲ್ಲ ಎಂದು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ನಿಷ್ಪಕ್ಷಪಾತ ನ್ಯಾಯದ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುವ ಮನಸ್ಸು ನಿಮ್ಮಲ್ಲಿದೆ ಎಂದು ನಾನು ಭಾವಿಸುತ್ತೇನೆ. ಅಲ್ಲದೆ, ನೀವು ಸುಪ್ರೀಂಕೋರ್ಟ್ಗಿಂತ ಮೇಲಿರುವ ಅಧಿಕಾರ ಮತ್ತು ನೀವು ಸಂಸತ್ತಿನೊಂದಿಗೆ ಸಹಕರಿಸಿದರೆ ಸಾಕಷ್ಟು ಬದಲಾವಣೆಗಳನ್ನು ಮಾಡುವ ಅಧಿಕಾರವನ್ನು ಹೊಂದಿದ್ದೀರಿ ಎಂದು ಪತ್ರದಲ್ಲಿದೆ ಎಂದು ವರಿದಿಗಳು ಉಲ್ಲೇಖಿಸಿವೆ,(ಏಜೆನ್ಸೀಸ್).