ಪತ್ನಿಯ ಶೀಲ ಶಂಕಿಸಿ 3 ವರ್ಷದ ಪುತ್ರನ ಕೊಂದ ಟೆಕ್ಕಿ

17-67deff9b71f07
Published on

ಪುಣೆ: ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ, ತನ್ನ 3 ವರ್ಷದ ಪುತ್ರನನ್ನು ಕತ್ತು ಸೀಳಿ ಕೊಲೆ ಮಾಡಿ ಅರಣ್ಯದಲ್ಲಿ ಎಸೆದಿದ್ದ ಟೆಕ್ಕಿಯನ್ನು ಪುಣೆಯ ಚಂದನ್​ನಗರ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶ ಮೂಲದ ಮಾಧವ ಟಿಕೇಟಿ ಮತ್ತು ಸ್ವರೂಪಾ ದಂಪತಿ ತಮ್ಮ ಪುತ್ರ ಹಿಮ್ಮತ್ ಮಾಧವ ಟಿಕೇಟಿಯೊಂದಿಗೆ ಪುಣೆಯಲ್ಲಿ ವಾಸವಾಗಿದ್ದರು.

ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯ ಮೇಲೆ ಗುರುವಾರ ದಂಪತಿ ನಡುವೆ ಜಗಳ ನಡೆದಿದೆ. ಈ ವೇಳೆ ಮಾಧವ ಟಿಕೇಟಿ ತನ್ನ ಪುತ್ರನೊಂದಿಗೆ ಹೊರಗೆ ಹೋಗಿದ್ದ. ತಡರಾತ್ರಿಯಾದರೂ ಪತಿ ಮತ್ತು ಮಗ ವಾಪಸ್ ಬರದಿದ್ದಾಗ ಸ್ವರೂಪಾ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ ಆತ ಮಧ್ಯಾಹ್ನ ಪುತ್ರನೊಂದಿಗೆ ಇರುವುದು ಮತ್ತು ಸಂಜೆ ಒಬ್ಬನೇ ಇರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮೊಬೈಲ್ ಲೊಕೇಶನ್ ಆಧರಿಸಿ ಪೊಲೀಸರು ಮಾಧವ್​ನನ್ನು ಹುಡುಕಿದ್ದರು. ಕುಡಿದ ಮತ್ತಿನಲ್ಲಿದ್ದ ಆತ ಪ್ರಜ್ಞೆ ಬಂದ ಬಳಿಕ ತನ್ನ ಪುತ್ರನನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net