ಬತ್ತಿದ ಅನ್ನದಾತರ ಕಣ್ಣೀರು

HYR SHENGA (1)
Published on

ಹಿರಿಯೂರು: ಮಳೆ ಕೊರತೆಯಿಂದ ಮುಂಗಾರು ಬಿತ್ತನೆಯ ಗುರಿ ಶೇ. 20 ಮೀರಿಲ್ಲ. ಸರ್ಕಾರ ಬರ ಪೀಡಿತ ತಾಲೂಕು ಘೋಷಿಸಿದ್ದು ಬೆಳೆ ನಷ್ಟ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ.

ತಾಲೂಕಿನ ಧರ್ಮಪುರ, ಐಮಂಗಲ, ಜೆ.ಜಿ. ಹಳ್ಳಿ, ವಿವಿ ಪುರ, ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಬರದ ಛಾಯೆ ಆವರಿಸಿದೆ.
ಶೇಂಗಾ ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬಿತ್ತನೆ ಪ್ರಮಾಣ 11 ಸಾವಿರ ಹೆಕ್ಟೇರ್‌ಗೆ ಇಳಿದಿದೆ. ಜೋಳ, ಹುರುಳಿ, ಸಜ್ಜೆ, ನವಣೆ ಸೇರಿ ಮಳೆಯಾಶ್ರಿತ ಬೆಳೆಗಳು ತೇವಾಂಶ ಕೊರತೆಯಿಂದ ಒಣಗಿವೆ.

ಬೆಳೆ ವಿಮೆ: ಮಳೆಯಾಶ್ರಿತ ಬೆಳೆಗಳಿಗೆ ರೈತರು ವಿಮೆ ಪಾವತಿಸಿದ್ದಾರೆ. ಬೆಳೆ ನಷ್ಟದ ಕುರಿತು ಅಧಿಕಾರಿಗಳು ಸರ್ಕಾರಕ್ಕೆ ವಾಸ್ತವ ವರದಿ ಸಲ್ಲಿಸಬೇಕು. ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ನೀರಾವರಿ ಬೆಳೆಗಳಾದ ಬಾಳೆ, ಅಡಕೆ, ಈರುಳ್ಳಿ, ದಾಳಿಂಬೆ, ಪಪ್ಪಾಯ, ಟೊಮ್ಯಾಟೋ ಉಳಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ. ಸಚಿವ ಡಿ.ಸುಧಾಕರ್ ಅವರು ಜಿಲ್ಲೆಗೆ ವಿಶೇಷ ಪ್ಯಾಕೇಜ್ ತರುವ ಮೂಲಕ , ನೆರವಿಗೆ ಧಾವಿಸುವಂತೆ ರೈತರು ಒತ್ತಾಯಿಸಿದ್ದಾರೆ.

ನೆರವಿಗೆ ಬರಬೇಕು: ಹಿರಿಯೂರು ತಾಲೂಕಿನಲ್ಲಿ ಕಳೆದ ವರ್ಷ ಅತಿವೃಷ್ಟಿಯಿಂದ ಬೆಳೆ ಹಾನಿ ಆಗಿ ಆದಾಗ ಬಿಜೆಪಿ ಸರ್ಕಾರ ರೈತರ ನಿರೀಕ್ಷೆಗೂ ಮಿರಿ ಪರಿಹಾರ ನೀಡಿತ್ತು. ಈಗಿನ ರಾಜ್ಯ ಸರ್ಕಾರ ವಿಳಂಬ ಮಾಡದೇ ಅನ್ನದಾತರ ನೆರವಿಗೆ ಧಾವಿಸಬೇಕು.-ಕೆ.ಪೂರ್ಣಿಮಾ, ಶಾಸಕಿ, ಹಿರಿಯೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net