ಗಣತಿದಾರ ಶಿಕ್ಷಕರು ಮೃತಪಟ್ಟರೆ ಪರಿಹಾರ ನೀಡುವಂತೆ ಶಿಕ್ಷಕರ ಸಂಘ ಆಗ್ರಹ

caste census
Published on

ಬೆಂಗಳೂರು: ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆಗೆ ತೆರಳಿದ ಸಂದರ್ಭದಲ್ಲಿ ಅಪಘಾತ ಅಥವಾ ಇನ್ನಿತರ ಕಾರಣದಿಂದ ಗಣತಿದಾರ ಶಿಕ್ಷಕರು ಮೃತಪಟ್ಟರೆ ಅವರ ಕುಟುಂಬದ ಸದಸ್ಯರಿಗೆ ಒಂದು ಕೋಟಿ ರೂ. ಪರಿಹಾರ ನೀಡುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಆಗ್ರಹಿಸಿದೆ.

ಈ ಹಿಂದೆ ನಾಗಮೋಹನ್ ದಾಸ್ ಸಮಿತಿಯು ಒಳ ಮೀಸಲಾತಿಯ ಬಗ್ಗೆ ಸಮೀಕ್ಷೆ ನಡೆಸಿದ ಸಂದರ್ಭದಲ್ಲಿ ಅವಘಡ ಘಟಿಸಿದರೆ ಮೃತರ ಕುಟುಂಬಕ್ಕೆ ಸಮಾಜ ಕಲ್ಯಾಣ ಆಯುಕ್ತರು ಒಂದು ಕೋಟಿ ರೂ. ಪರಿಹಾರ ನೀಡಿದ್ದರು. ಇದೇ ರೀತಿ ಈ ಬಾರಿಯು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ಹಿಂದುಳಿದ ವರ್ಗಗಳ ಆಯೋಗವನ್ನು ಒತ್ತಾಯಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ರಾಂಪೂರ ಶಾಲೆಯ ಜನತಾ ಕಾಲನಿಯ ಸಹಶಿಕ್ಷಕಿ ದಾನಮ್ಮ ಗಣತಿ ಕಾರ್ಯ ಮುಗಿಸಿ ಮರುಳುವಾಗ ಅಪಘಾತಕ್ಕೀಡಾಗಿ ಮೃತಪಟ್ಟಿರುವುದನ್ನು ಉಲ್ಲೇಖಿಸಿ ಶಿಕ್ಷಕರ ಸಂಘ ಈ ಒತ್ತಾಯ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net